ಮಂಗಳವಾರ, ಅಕ್ಟೋಬರ್ 15, 2019
28 °C
ಮಡಿಕೇರಿ ರೋಟರಿಯಿಂದ ಸಾಧಕರಿಗೆ ಸನ್ಮಾನ

ಹಿರಿಯರ ಆರೈಕೆ ತಾಣ ಹೆಚ್ಚಳ: ವಿಷಾದ

Published:
Updated:
Prajavani

ಮಡಿಕೇರಿ: ‘ಸಂಸ್ಕೃತಿ ಬದಲಾವಣೆಯೊಂದಿಗೆ ಜೀವನ ವಿಧಾನವೂ ಬದಲಾದ ಪರಿಣಾಮ ಹಿರಿಯರನ್ನು ಗೌರವಿಸುವುದನ್ನು ಮರೆತಿದ್ದೇವೆ; ಇದೇ ಕಾರಣಕ್ಕೆ ಸಮಾಜದಲ್ಲಿ ಹಿರಿಯ ನಾಗರಿಕರ ಆರೈಕೆ ತಾಣಗಳು ಹೆಚ್ಚಾಗುತ್ತಿವೆ’ ಎಂದು ರೋಟರಿ ಜಿಲ್ಲಾ ಗವರ್ನರ್‌ ಜೊಸೇಫ್ ಮ್ಯಾಥ್ಯು ವಿಷಾದಿಸಿದರು.

ಮಡಿಕೇರಿ ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ ಸಂದರ್ಭ ರೋಟರಿ ವತಿಯಿಂದ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರನ್ನು ರೋಟರಿ ವತಿಯಿಂದ ಸನ್ಮಾನಿಸಿ ಮಾತನಾಡಿದ ಅವರು, ‘ಹಿರಿಯರ ವಿಶ್ರಾಂತಿ ತಾಣಗಳು ಹೆಚ್ಚಾಗುತ್ತಿರುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ’ ಎಂದು ಎಚ್ಚರಿಸಿದರು.

ಸ್ಥಿತಿವಂತ ಮಕ್ಕಳೂ ತಮ್ಮ ಹೆತ್ತವರನ್ನು ನಿರ್ಲಕ್ಷಿಸಿ ಹಿರಿಯ ನಾಗರಿಕರ ಆಶ್ರಯ ತಾಣಗಳಿಗೆ ಸೇರ್ಪಡೆಗೊಳಿಸುವಂತೆ ಆಗಿರುವುದು ಸಮಾಜದ ದುರಂತಗಳಲ್ಲಿ ಒಂದು. ವಯಸ್ಕರನ್ನು ಈ ರೀತಿ ಕಡೆಗಣಿಸುತ್ತಿರುವುದು ಸಾಮಾಜಿಕ ಪಿಡುಗಾಗಿ ಪರಿಣಮಿಸುತ್ತಿದೆ ಎಂದು ಹೇಳಿದರು.

‘ಹೋಮ್‌ ನರ್ಸ್‌ಗಳು ಮನೆಯೊಳಗೆ ಬಂದು ಹಿರಿಯರನ್ನು ಆರೈಕೆ ಮಾಡಲಾರಂಭಿಸುತ್ತಿರುವುದು ನಮ್ಮ ಸಂಸ್ಕೃತಿಯ ಅಧಃಪತನಕ್ಕೆ ಉದಾಹರಣೆ’ ಎಂದೂ ಬೇಸರ ವ್ಯಕ್ತಪಡಿಸಿದರು.

ರೋಟರಿ ಜಿಲ್ಲಾ ಸಹಾಯಕ ರಾಜ್ಯಪಾಲ ಪಿ.ನಾಗೇಶ್ ಮಾತನಾಡಿ, ಸೇವ್ ಎ ಲೈಫ್ ಎಂಬ ಯೋಜನೆಯೊಂದಿಗೆ ರೋಟರಿಯು ಪ್ರಥಮ ಚಿಕಿತ್ಸೆಗೆ ಆದ್ಯತೆ ನೀಡಿದ್ದು ಪ್ರಥಮ ಚಿಕಿತ್ಸಾ ಕಾರ್ಯಾಗಾರಗಳೂ ಸೇರಿದಂತೆ ಅನೇಕ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಅಪತ್ಕಾಲದಲ್ಲಿ  ಜೀವ ರಕ್ಷಣೆಗೆ ಈ ಯೋಜನೆ ಮೂಲಕ ಮುಂದಾಗಿದೆ ಎಂದು ಮಾಹಿತಿ ನೀಡಿದರು.

ರೋಟರಿ ಜೋನಲ್ ಲೆಫ್ಟಿನೆಂಟ್ ಕೇಶವಪ್ರಸಾದ್ ಮುಳಿಯ ಮಾತನಾಡಿ, ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡುವ ಶಿಕ್ಷಕರ ವೇತನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತಿಸಬೇಕಾಗಿದೆ. ಹಾಗಿದ್ದಾಗ ಮಾತ್ರ ಶಿಕ್ಷಕರ ವೃತ್ತಿಗೆ ಹೆಚ್ಚಿನ ಜನ ಬರಲು ಸಾಧ್ಯವಾಗುತ್ತದೆ. ವೇತನ ಪರಿಷ್ಕರಣೆ ಆಗದಿರುವುದರಿಂದಾಗಿಯೇ ಮೊದಲಿನಂತೆಯೇ ಶಿಕ್ಷಣ ವೃತ್ತಿಯನ್ನು ಹೆಚ್ಚಿನವರು ಆದ್ಯತೆಯಾಗಿ ಪರಿಗಣಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ಮಡಿಕೇರಿ ರೋಟರಿ ಅಧ್ಯಕ್ಷ ಕೆ.ಎಸ್.ರತನ್ ತಮ್ಮಯ್ಯ ಮಾತನಾಡಿದರು. ಮಡಿಕೇರಿ ರೋಟರಿಯಿಂದ ಮಕೇ೯ರಿಯನ್ ವಾತಾ೯ ಸಂಚಿಕೆಯನ್ನು ರಾಜ್ಯಪಾಲ ಜೊಸೇಫ್ ಮ್ಯಾಥ್ಯು ಬಿಡುಗಡೆ ಮಾಡಿದರು.

ಮಡಿಕೇರಿ ರೋಟರಿ ಕಾಯ೯ದಶಿ೯ ಕೆ.ಎಸ್. ಕಾಯ೯ಪ್ಪ , ಮಾಜಿ ಜಿಲ್ಲಾ ಗವನ೯ರ್ ಮಾತಂಡ ಸುರೇಶ್ ಚಂಗಪ್ಪ, ಡಾ.ಸಿ.ಜಿ.ಕುಶಾಲಪ್ಪ, ಡಾ.ಪಾಟ್ಕರ್ ತಿಮ್ಮಯ್ಯ , ಎಂ. ಕರುಂಬಯ್ಯ, ಎಚ್‌.ಟಿ.ಅನಿಲ್‌ ಹಾಜರಿದ್ದರು.

ಸನ್ಮಾನ: ಮಡಿಕೇರಿ ರೋಟರಿ ಕ್ಲಬ್‌ನಿಂದ ಮಡಿಕೇರಿಯ ಹಿರಿಯ ವೈದ್ಯ ಡಾ.ಎ.ಎನ್.ಗಣಪತಿ, ವಿಶಿಷ್ಟ ಸೇವಾ ಮೆಡಲ್ ಪಡೆದ ಕಂಡ್ರಂತಂಡ ಕರ್ನಲ್ ಸುಬ್ಬಯ್ಯ, ಡಾ.ಅನುಪಮಾ ಸಭಾಪತಿ ಅವರನ್ನು ಸನ್ಮಾನಿಸಲಾಯಿತು. ರೋಟರಿ ಜಿಲ್ಲಾ ಗವನ೯ರ್ ಜೊಸೇಫ್ ಮ್ಯಾಥ್ಯು ಅವರನ್ನು ಸನ್ಮಾನಿಸಿದರು.

 

 

Post Comments (+)