ಜಾತಿ ಧಿಕ್ಕರಿಸಿದ ಬ್ರಾಹ್ಮಣನಿಗೆ ನೆರವಾಗಿದ್ದು ಬಂಟರು: ಸಾಹಿತಿ ನಾ.ಮೊಗಸಾಲೆ

ಬುಧವಾರ, ಜೂಲೈ 17, 2019
29 °C

ಜಾತಿ ಧಿಕ್ಕರಿಸಿದ ಬ್ರಾಹ್ಮಣನಿಗೆ ನೆರವಾಗಿದ್ದು ಬಂಟರು: ಸಾಹಿತಿ ನಾ.ಮೊಗಸಾಲೆ

Published:
Updated:
Prajavani

ಬೆಂಗಳೂರು: ‘ದೇವಾಲಯದ ಒಳಗೆ ಪ್ರವೇಶವಿಲ್ಲದವರಿಗೆ ಗರ್ಭಗುಡಿಯೊಳಗೆ ಪ್ರವೇಶಕ್ಕೆ ಅವಕಾಶ ನೀಡಿ ಅವರೊಂದಿಗೆ ಕೂತು ಭೋಜನ ಮಾಡಿದೆ. ಹೀಗಾಗಿ ನನ್ನನ್ನು ಹಲವರುವಿರೋಧಿಸಿದರು. ಆ ಕಾಲದಲ್ಲಿ ನನಗೆ ನೆರವಾದ ಎಸ್.ಬಂಗಾರಪ್ಪ ಅವರನ್ನು ಸದಾ ಸ್ಮರಿಸುತ್ತೇನೆ’ ಎಂದು ಸಾಹಿತಿ ನಾ.ಮೊಗಸಾಲೆ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ
ಮಾತನಾಡಿದ ಅವರು, ‘ಕಾಲೇಜು ದಿನಗಳಲ್ಲಿ ಅವರಿವರನ್ನು ‌ಕಾಡಿಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ. ನಾನು ಬ್ರಾಹ್ಮಣನಾಗಿ ಜನಿಸಿದ್ದರೂ ಅಂದು ನನಗೆ ಬಂಟರು ನೆರವಾದರು’ ಎಂದರು.

‘ಬಾಲ್ಯದಲ್ಲೇ ತಂದೆ ಕಳೆದುಕೊಂಡೆ. ಗುರುಗಳು ಹಾಗೂ ಸೋದರತ್ತೆಯಿಂದ ಪ್ರಭಾವಿತನಾಗಿ ಸಾಹಿತ್ಯದತ್ತ ಮುಖಮಾಡಿದೆ. ವೈದ್ಯಕೀಯ ಕೋರ್ಸ್ ಮುಗಿಸಿ ವೈದ್ಯಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿದೆ. ಬಡತನದಲ್ಲಿದ್ದ ನಾನು ಹರಿದ ಬಟ್ಟೆಯಲ್ಲೇ ಸಂದರ್ಶನಕ್ಕೆ ಹಾಜರಾದೆ. ನನ್ನ ಸ್ಥಿತಿ ನೋಡಿ ಸಂದರ್ಶಕರ ಮನಸು ಕರಗಿ ಕೆಲಸ ನೀಡಿದರು’ ಎಂದು ನೆನೆದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !