ಆರ್ಕಿಡ್‌ ಸಸ್ಯಗಳ ಉಳಿವಿಗಾಗಿ ಜಾಗೃತಿ

7

ಆರ್ಕಿಡ್‌ ಸಸ್ಯಗಳ ಉಳಿವಿಗಾಗಿ ಜಾಗೃತಿ

Published:
Updated:
Deccan Herald

ಬೆಂಗಳೂರು: ಮದುವೆ, ಸಭೆ, ಸಮಾರಂಭಗಳಲ್ಲಿ ‌ಅಲಂಕಾರವನ್ನು ಹೆಚ್ಚಾಗಿ ಇಷ್ಟಪಡುವ ನಗರದ ಜನರಿಗೆ ಅವುಗಳ ಬೆಳವಣಿಗೆ, ಪೋಷಣೆ ಇತ್ಯಾದಿ ಕುರಿತು ಮಾಹಿತಿ ನೀಡಲು ರಾಜ್ಯ ಆರ್ಕಿಡ್‌ ಸೊಸೈಟಿ ಶನಿವಾರದಿಂದ ಎರಡು ದಿನಗಳ ಕಾಲ ಲಾಲ್‌ಬಾಗ್‌ನ ಡಾ. ಎಂ.ಎಚ್‌.ಮರೀಗೌಡ ಸ್ಮಾರಕ ಭವನದಲ್ಲಿ ಆರ್ಕಿಡ್‌ ಸಸ್ಯಗಳ ಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸಿತ್ತು.

‘ಕೆಲವು ಅಳಿವಿನಂಚಿನಲ್ಲಿರುವ ಆರ್ಕಿಡ್‌ ಸಸ್ಯಗಳ ಉಳಿವಿಗಾಗಿ ಜಾಗೃತಿ ಮೂಡಿಸಲು ಮತ್ತು ಆರ್ಕಿಡ್‌ಗಳನ್ನು ಸುಲಭವಾಗಿ ಮನೆಯಲ್ಲೂ ಬೆಳೆಸಬಹುದು ಎಂಬುದರ ಬಗ್ಗೆ ಮಾಹಿತಿ ನೀಡಲು ಈ ಪ್ರದರ್ಶನವನ್ನು ಆಯೋಜಿಸಲಾಗಿದೆ’ ಎಂದು ಸೊಸೈಟಿಯ ಅಧ್ಯಕ್ಷ ಡಾ. ಸದಾನಂದ ಹೆಗ್ಡೆ ತಿಳಿಸಿದರು.

‘ಸುಮಾರು ₹5 ಲಕ್ಷ ವೆಚ್ಚದಲ್ಲಿ ಆಯೋಜಿಸಿದ್ದ ಮೇಳಕ್ಕೆ ಸಾವಿರಾರು ಜನ ಭೇಟಿ ನೀಡಿದ್ದಾರೆ. ಆರ್ಕಿಡ್‌ಗಳನ್ನು ಬೆಳೆಸುವ ಕುರಿತು ಎರಡು ದಿನಗಳ ತರಬೇತಿ ನೀಡಲು, ಸೊಸೈಟಿಯಲ್ಲಿ ಈಗಾಗಲೇ ನೋಂದಾಯಿಸಿಕೊಂಡಿರುವ ಸದಸ್ಯರಿಂದ ₹500 ಮತ್ತು ಹೊಸದಾಗಿ ಬಂದ ಸದಸ್ಯರಿಂದ ₹300 ಶುಲ್ಕ ಸಂಗ್ರಹಿಸಿದ್ದೇವೆ. ಎರಡು ದಿನಗಳಲ್ಲಿ ಸುಮಾರು 300 ಜನ ತರಬೇತಿ ಪಡೆದರು’ ಎಂದು ಮಾಹಿತಿ ನೀಡಿದರು.

ಲೇಡಿಸ್‌ ಸ್ಲಿಪ್ಪರ್‌ (Lady's slipper), ಪರ್ಲ್‌ (Pearl), ಡೆಂಡ್ರೋಬಿಯಂ (Dendrobium orchid) ಮುಂತಾದ ಆರ್ಕಿಡ್‌ ಸಸ್ಯಗಳು ಗಮನ ಸೆಳೆದವು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !