ಮತದಾನ ಜಾಗೃತಿಗೆ ಏ.13ರಂದು ಪ್ಯಾರಾಗ್ಲೈಡಿಂಗ್: ಹಾರಾಡಲು ಮತದಾರರಿಗೆ ಅವಕಾಶ

ಮಂಗಳವಾರ, ಏಪ್ರಿಲ್ 23, 2019
31 °C

ಮತದಾನ ಜಾಗೃತಿಗೆ ಏ.13ರಂದು ಪ್ಯಾರಾಗ್ಲೈಡಿಂಗ್: ಹಾರಾಡಲು ಮತದಾರರಿಗೆ ಅವಕಾಶ

Published:
Updated:

ಹುಬ್ಬಳ್ಳಿ: ಮತದಾನ ಜಾಗೃತಿಗೆ ನಗರದ ನೆಹರೂ ಮೈದಾನದಲ್ಲಿ ಇಂದು (ಏ.13) ಪ್ಯಾರಾಗ್ಲೈಡಿಂಗ್ ಆಯೋಜಿಸಲಾಗಿದೆ ಎಂದು ಹುಬ್ಬಳ್ಳಿ ಶಹರ ತಹಶಿಲ್ದಾರ ಶಶಿಧರ ಮಾಡ್ಯಾಳ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 9.30ರಿಂದ 11.30ರ ವರೆಗೆ ಕಾರ್ಯಕ್ರಮ ನಡೆಯಲಿದ್ದು, ಮತದಾರರಿಗೆ ಹಾರಾಡಲು ಅವಕಾಶ ನೀಡಲಾಗುವುದು. ಒಬ್ಬರು ಐದರಿಂದ ಆರು ನಿಮಿಷ ಪ್ಯಾರಾಗ್ಲೈಡಿಂಗ್ ಮೂಲಕ 200 ಅಡಿ ಎತ್ತರದಲ್ಲಿ ಹಾರಾಡಬಹುದು. ಚನ್ನಮ್ಮ ವೃತ್ತದಲ್ಲಿ 15ರಂದು ಸಂಜೆ 6 ಗಂಟೆಗೆ ರಾಯಲ್ ಎನ್‌ಫೀಲ್ಡ್ ಬೈಕ್ ರ‍್ಯಾಲಿ ಆಯೋಜಿಸಲಾಗಿದೆ. ಹುಬ್ಬಳ್ಳಿ ಬುಲೆಟ್ ಕ್ಲಬ್ ಸದಸ್ಯರು ಅದರಲ್ಲಿ ಪಾಲ್ಗೊಳ್ಳುವರು. ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್, ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಬಿ.ಸಿ. ಸತೀಶ ಉಪಸ್ಥಿತರಿರುವರು ಎಂದರು.

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಲ್ಲಿ 18ರಂದು ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಸಾರ್ವಜನಿಕರು ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

ಹುಬ್ಬಳ್ಳಿಯಲ್ಲಿ ಒಟ್ಟು 72 ಮಂದಿ ಲಿಂಗತ್ವ ಅಲ್ಪಸಂಖ್ಯಾತರಿದ್ದು, ಅವರಲ್ಲಿ 62 ಮಂದಿ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಿ ಗುರುತಿನ ಚೀಟಿ ನೀಡಲಾಗಿದೆ. ಈ ಸಂಖ್ಯೆ ಇನ್ನೂ ಹೆಚ್ಚಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವಾಗ ಮಹಿಳೆ ಇದ್ದವರು, ಆ ನಂತರ ಪುರುಷ ಆಗಿರಬಹುದು. ಈಗ ಅವರನ್ನು ಮತ್ತೆ ಲಿಂಗತ್ವ ಅಲ್ಪಸಂಖ್ಯಾತರ ಪಟ್ಟಿಗೆ ಸೇರಿಸಲು ಸಮಯಾವಕಾಶ ಬೇಕಾಗುತ್ತದೆ ಎಂದರು.

ಯುವ ಮತದಾರರನ್ನು ಸೆಳೆಯಲು ಫೇಸ್‌ಬುಕ್ ಲೈವ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಚಿಂತನೆ ಇದೆ. ಇದಕ್ಕಾಗಿ ಈಗಾಗಲೇ ಹುಬ್ಬಳ್ಳಿ ತಹಶೀಲ್ದಾರ್ ಕಚೇರಿಯ ಪ್ರತ್ಯೇಕ ಫೇಸ್‌ಬುಕ್ ಪುಟ ಆರಂಭಿಸಲಾಗಿದೆ ಎಂದರು. ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಸಂಗಮೇಶ್ ಬ್ಯಾಡಗಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಾಟೀಲ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !