‌ಮೋದಿ ಗೈರಿಗೆ ಪರಮೇಶ್ವರ ಆಕ್ಷೇಪ

7
ಸಿದ್ಧಗಂಗಾ ಶ್ರೀಗಳ ಕ್ರಿಯಾಸಮಾಧಿ‌

‌ಮೋದಿ ಗೈರಿಗೆ ಪರಮೇಶ್ವರ ಆಕ್ಷೇಪ

Published:
Updated:

ಬೆಂಗಳೂರು: ಸಿದ್ಧಗಂಗಾ ಶ್ರೀಗಳ ಕ್ರಿಯಾಸಮಾಧಿಗೆ ಪ್ರಧಾನಿ ನರೇಂದ್ರ ಮೋದಿ ಗೈರು ಹಾಜರಾಗಿದ್ದಕ್ಕೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಮೋದಿಯವರು ಸೆಲೆಬ್ರಿಟಿಗಳ ಮದುವೆ ಸಮಾರಂಭಕ್ಕೆ ಹಾಜರಾಗುತ್ತಾರೆ. ಚಲನಚಿತ್ರ ನಟ-ನಟಿಯರನ್ನು ಭೇಟಿಯಾಗಲು ಅವರಿಗೆ ಸಮಯವಿರುತ್ತದೆ’ ಎಂದು ಪರಮೇಶ್ವರ ಟ್ವೀಟ್‌ ಮಾಡಿದ್ದಾರೆ.

‘ಜೀವನಪೂರ್ತಿ ಬಡವರು, ದೀನದಲಿತರು, ಮಧ್ಯಮ ವರ್ಗದವರಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಅವರ ಶ್ರೇಯಸ್ಸಿಗೆ ಶ್ರಮಿಸಿದ ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿಯವರ ಕ್ರಿಯಾ ಸಮಾಧಿಗೆ ಬರಲು ಮೋದಿಗೆ ಸಮಯ ಇಲ್ಲವೇ’ ಎಂದೂ ಅವರು ಪ್ರಶ್ನಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಬುಧವಾರ ಮಾತನಾಡಿದ ಪರಮೇಶ್ವರ, ‘ಎರಡು ವರ್ಷಗಳ ಹಿಂದೆಯೇ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಮನವಿ ಮಾಡಿದ್ದೆವು.‌ ಆದರೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ.‌ ಇದು ಇಡೀ ಸಮಾಜಕ್ಕೆ ತೋರುವ ಅಗೌರವ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಹೇಳಿಕೆ ನೀಡುವುದಿಲ್ಲ: ‘ಮೋದಿ ಗೈರು ಬಗ್ಗೆ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ. ಏನಾದರೂ ಹೇಳಿದರೆ ಅದು ವಿವಾದ ಆಗಬಹುದು’ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಹೇಳಿದರು.

‘ಶಿವಕುಮಾರ ಸ್ವಾಮೀಜಿಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಬೇಕು. ಕೇಂದ್ರದ ನಾಯಕರಿಗೂ ಶ್ರೀಗಳ ಸೇವೆ ಬಗ್ಗೆ ಅರಿವಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !