ರೋಗಿಗಳು ಪ್ರಯೋಗಾಲಯಗಳಲ್ಲ: ಬಿ.ಎಂ.ಹೆಗ್ಡೆ

ಶುಕ್ರವಾರ, ಮಾರ್ಚ್ 22, 2019
31 °C

ರೋಗಿಗಳು ಪ್ರಯೋಗಾಲಯಗಳಲ್ಲ: ಬಿ.ಎಂ.ಹೆಗ್ಡೆ

Published:
Updated:
Prajavani

ಪೀಣ್ಯ–ದಾಸರಹಳ್ಳಿ: ‘ರೋಗಿಗಳು ಪ್ರಯೋಗಾಲಯಗಳಲ್ಲ ಎಂಬುದನ್ನು ವೈದ್ಯರ ಸಮೂಹ ಮನಗಾಣಬೇಕು’ ಎಂದು ಶಿಕ್ಷಣ ತಜ್ಞ ಡಾ.ಬಿ.ಎಂ.ಹೆಗ್ಡೆ ಹೇಳಿದರು.

ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರೋಗಿಗಳು ವೈದ್ಯರ ಯಜಮಾನರು. ಅವರ ರೋಗ ವಾಸಿ ಮಾಡಲು ಮಾತ್ರ ಔಷಧ ನೀಡಬೇಕು. ಅನಗತ್ಯವಾಗಿ ಔಷಧಿಗಳ ಪ್ರಯೋಗ ಮಾಡಬಾರದು’ ಎಂದು ಕಿವಿಮಾತು ಹೇಳಿದರು.

'ದೇಶದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಔಷಧ ಉತ್ಪಾದನಾ ಕಂಪನಿಗಳಿವೆ. ಔಷಧ ಉತ್ಪಾದಕರ ಆಮಿಷಕ್ಕೆ ಮಣಿದು ಕೆಲವು ವೈದ್ಯರು ರೋಗಿಗಳಿಗೆ ಆರೇಳು ಬಗೆಯ ಔಷಧಿಗಳನ್ನು ಬರೆದುಕೊಡುತ್ತಿದ್ದಾರೆ. ಇದು ರೋಗಿಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ಮೊದಲು ವೈದ್ಯರು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಉತ್ತಮ ಮಾನವೀಯ ಗುಣಗಳನ್ನು ಬೆಳೆಸಿಕೊಂಡಾಗ ವೈದ್ಯರಿಗೆ ಗೌರವ ಸಿಗುತ್ತದೆ' ಎಂದರು. 

144 ವಿದ್ಯಾರ್ಥಿಗಳಿಗೆ ವೈದ್ಯಕೀಯ ಪದವಿ, ಇಬ್ಬರಿಗೆ ಸ್ನಾತಕೋತ್ತರ ಪದವಿ ಹಾಗೂ 11 ವಿದ್ಯಾರ್ಥಿಗಳಿಗೆ ವಿಜ್ಞಾನ ಕೋರ್ಸ್‌ಗಳ ಪದವಿ ಪ್ರದಾನ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !