ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15ರಂದು ಪಿಬಿಎಸ್‌ ಕುರಿತ ಕೃತಿ ಬಿಡುಗಡೆ

Last Updated 12 ಡಿಸೆಂಬರ್ 2018, 19:49 IST
ಅಕ್ಷರ ಗಾತ್ರ

ಬೆಂಗಳೂರು: ತೆಲುಗು ವಿಜ್ಞಾನ ಸಮಿತಿ ವತಿಯಿಂದ ‘ಬಹುಮುಖ ಪ್ರತಿಭೆಯ ‌ಡಾ.ಪಿ.ಬಿ.ಶ್ರೀನಿವಾಸ್’ ಕೃತಿ ಬಿಡುಗಡೆ ಸಮಾರಂಭವನ್ನು ಇದೇ 15ರಂದು ಸಂಜೆ 5ಕ್ಕೆ ವೈಯಾಲಿಕಾವಲ್‌ನ ಶ್ರೀ ಕೃಷ್ಣದೇವರಾಯ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಡಾ.ಎ.ರಾಧಾಕೃಷ್ಣ ರಾಜು, ‘ಡಾ.ರಂಗನಾಥ ನಂದ್ಯಾಲ ಅವರು ಖ್ಯಾತ ಗಾಯಕ ಪಿ.ಬಿ.ಶ್ರೀನಿವಾಸ್‌ ಅವರ ಕುರಿತು ಇಂಗ್ಲಿಷ್‌ನಲ್ಲಿ ಈ ಕೃತಿ ರಚಿಸಿದ್ದಾರೆ. ಶ್ರೀನಿವಾಸ್‌ ಅವರ ಹಾಡುಗಳು ಇಂದಿಗೂ ಜನಪ್ರಿಯ. ಅವರಿಗೆ ಘಜಲ್‌ ಸಂಗೀತ ಬಹಳ ಪ್ರಿಯವಾಗಿತ್ತು’ ಎಂದು ತಿಳಿಸಿದರು.

‘ಈ ಕೃತಿಯಲ್ಲಿ ಶ್ರೀನಿವಾಸ್‌ ಅವರ ಬಗೆಗಿನ ಹಾಡುಗಾರಿಕೆ, ಬರಹ ಪ್ರತಿಭೆ ಮತ್ತು ಜೀವನವನ್ನು ಆವಿಷ್ಕರಿಸಲಾಗಿದೆ. ನಟ ಶ್ರೀನಾಥ್ ಕೃತಿ ಬಿಡುಗಡೆ ಮಾಡಲಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT