ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಪ್ರಯಾಣಿಕರಿಗೆ ಗಿಡ ವಿತರಣೆ

Last Updated 3 ಜೂನ್ 2019, 20:04 IST
ಅಕ್ಷರ ಗಾತ್ರ

ಬೆಂಗಳೂರು: ನೀವು ಗಿಡಮರಗಳನ್ನು ಪ್ರೀತಿಸುತ್ತಿದ್ದೀರಾ? ಹಾಗಿದ್ದರೆ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ಡಾಣದಿಂದ ಸಸಿಯೊಂದನ್ನು ಮನೆಗೆ ಒಯ್ಯುವ ಅವಕಾಶ ಒದಗಿ ಬಂದಿದೆ.

ವಿಮಾನ ನಿಲ್ದಾಣದ ಆಡಳಿತ ಮಂಡಳಿಯು ಹಂತ ಹಂತವಾಗಿ ಪ್ರತಿ ಸಂದರ್ಶಕರು ಮತ್ತು ಪ್ರಯಾಣಿಕರಿಗೆ ಒಂದರಂತೆ 10 ಸಾವಿರ ಸಸ್ಯಗಳನ್ನು ನೀಡಲಿದೆ. ಈ ಉಪಕ್ರಮ ವಿಶ್ವ ಪರಿಸರ ದಿನದ ಅಂಗವಾಗಿ ಜೂನ್‌ 5ರಿಂದ ಆರಂಭವಾಗಲಿದೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವ ಎಲ್ಲಾ ಪ್ರಯಾಣಿಕರು ಮತ್ತು ಸಂದರ್ಶಕರು https://bengaluruairport.co/Adopt-A-Plant/ ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

‘ವಿಮಾನ ನಿಲ್ದಾಣದಲ್ಲಿ ₹13 ಸಾವಿರ ಕೋಟಿ ಮೊತ್ತದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಸುತ್ತಲಿನ ಭೂದೃಶ್ಯವನ್ನು ಕೂಡ ಗಮನಾರ್ಹ ರೀತಿಯಲ್ಲಿ ಪರಿವರ್ತನೆ ಮಾಡಲಾಗುತ್ತಿದೆ. ತೋಟದ ಮಾದರಿಯಲ್ಲಿ ಟರ್ಮಿನಲ್ 2 ಅನ್ನು ವಿನ್ಯಾಸಗೊಳಿಸಲಾಗುತ್ತಿದ್ದು, ಇದು ಬೆಂಗಳೂರಿನ ಹಸಿರನ್ನು ಬಿಂಬಿಸಲಿದೆ. ಹಲವಾರು ಮರಗಳು ಮತ್ತು ಗಿಡಗಳನ್ನು ಸುರಕ್ಷಿತವಾಗಿ ಬೇರೆ ಸ್ಥಳಗಳಿಗೆ ವರ್ಗಾಯಿಸಲಾಗುತ್ತಿದ್ದು, ಮತ್ತೆ ಬಳಸಲಾಗದ ಸಸ್ಯಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಗುತ್ತಿದೆ’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT