ಪ್ಲಾಸ್ಟಿಕ್ ದುಷ್ಪರಿಣಾಮ ಜಾಗೃತಿ ಮೂಡಿಸಿದ ರೋಟರಿ ಸದಸ್ಯರು

7

ಪ್ಲಾಸ್ಟಿಕ್ ದುಷ್ಪರಿಣಾಮ ಜಾಗೃತಿ ಮೂಡಿಸಿದ ರೋಟರಿ ಸದಸ್ಯರು

Published:
Updated:
Deccan Herald

ಹುಬ್ಬಳ್ಳಿ: ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮದ ಬಗ್ಗೆ ರೋಟರಿ ಕ್ಲಬ್ ಹುಬ್ಬಳ್ಳಿ ಸದಸ್ಯರು ನಗರದ ದುರ್ಗದ ಬೈಲ್ ವೃತ್ತದಲ್ಲಿ ಶನಿವಾರ ಜಾಗೃತಿ ಮೂಡಿಸಿದರು. ವ್ಯಾಪಾರಿಗಳು ಹಾಗೂ ಗ್ರಾಹಕರೊಂದಿಗೆ ಮಾತನಾಡಿದ ಅವರು, ಪ್ಲಾಸ್ಟಿಕ್ ಕೈ ಚೀಲ ಬಳಸದಂತೆ ಮನವಿ ಮಾಡಿದರು. ಉಚಿತವಾಗಿ ಬಟ್ಟೆ ಚೀಲವನ್ನು ಸಹ ವಿತರಿಸಿದರು.

‘ಬಟ್ಟೆ ಕೈಚೀಲ ತಯಾರಿಕೆ ಬಗ್ಗೆ ನಮ್ಮ ಸಂಸ್ಥೆ ಮಹಿಳೆಯರಿಗೆ ಉಚಿತ ತರಬೇತಿ ನೀಡುತ್ತಿದೆ. ತರಬೇತಿ ಪಡೆದವರು ಮನೆಯಲ್ಲಿಯೇ ಚೀಲ ತಯಾರಿಸಿ ಮಾರಾಟ ಮಾಡಬಹುದು. ಅಲ್ಲದೆ ನಾವು ಸಹ ಗ್ರಾಹಕರಿಗೆ ಉಚಿತವಾಗಿ ಕೈಚೀಲ ವಿತರಣೆ ಮಾಡುತ್ತಿದ್ದೇವೆ. ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಲ್ಲಬೇಕು ಎಂಬುದು ಉದ್ದೇಶವಾಗಿದೆ’ ಎಂದು ರೋಟರಿ ಕ್ಲಬ್ ಹುಬ್ಬಳ್ಳಿ ಅಧ್ಯಕ್ಷ ಅಬ್ದುಲ್ ಸಾದಿಕ್ ಹೇಳಿದರು.

ಪಾಲಿಕೆಯ ನಿವೃತ್ತ ಆರೋಗ್ಯಾಧಿಕಾರಿ ನಿಟಾಲಿ ಮಾತನಾಡಿ, ಹುಬ್ಬಳ್ಳಿ– ಧಾರವಾಡ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರತಿ ದಿನ 300 ಟನ್ ಕಸ ಉತ್ಪತ್ತಿಯಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದರೆ, ಇದನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಿದೆ. ಪ್ಲಾಸ್ಟಿಕ್‌ನಿಂದ ಪರಿಸರದ ಮೇಲೆ ಆಗುವ ಹಾನಿಯನ್ನೂ ತಡೆಯಬಹುದು ಎಂದರು.

ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕು ಎಂದರೆ ಜನರಲ್ಲಿ ಆ ಬಗ್ಗೆ ಜಾಗೃತಿ ಮೂಡಬೇಕು. ಜನರ ಮನೋಭಾವನೆಯೂ ಬದಲಾಗಬೇಕು. ಪ್ಲಾಸ್ಟಿಕ್ ಬಳಸುವುದಿಲ್ಲ ಎಂದು ಎಲ್ಲರೂ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.  ಸಹಾಯಕ ಗೌರ್ನರ್‌ ವಿಜಯ್, ನರೇಂದ್ರ ಬರಿವಾಲ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !