ಕರಗುವ ಪ್ಲಾಸ್ಟಿಕ್‌ ನಕಲಿ ಪ್ರಮಾಣಪತ್ರ

7

ಕರಗುವ ಪ್ಲಾಸ್ಟಿಕ್‌ ನಕಲಿ ಪ್ರಮಾಣಪತ್ರ

Published:
Updated:

ಬೆಂಗಳೂರು: ಜೈವಿಕವಾಗಿ ಕರಗಬಲ್ಲ ಕ್ಯಾರಿಬ್ಯಾಗ್‌ಗಳೆಂದು ನಂಬಿಸಿ ಪ್ಲಾಸ್ಟಿಕ್‌ ಉತ್ಪನ್ನ ಮಾರಾಟ ಮಾಡುತ್ತಿರುವ ಕಂಪನಿಗಳ ವಿರುದ್ಧ  ಕ್ರಮಕೈಗೊಳ್ಳಬೇಕೆಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಸೂಚಿಸಿದೆ.

ದೇಶದ ಒಟ್ಟು 12 ಕಂಪನಿಗಳು ನಕಲಿ ಪ್ರಮಾಣಪತ್ರ ಪಡೆದು ಇಂತಹ ಕಾನೂನುಬಾಹಿರ ‌ಚಟುವಟಿಕೆಯಲ್ಲಿ ತೊಡಗಿವೆ. ಬೆಂಗಳೂರಿನ ಬಯೋಗ್ರೀನ್‌, ಎನ್ವಿಗ್ರೀನ್‌ ಎಂಬ ಕಂಪನಿಗಳೂ ಈ ಪಟ್ಟಿಯಲ್ಲಿವೆ. ಇವು ನಮ್ಮಿಂದ ಯಾವುದೇ ಪ್ರಮಾಣಪತ್ರವನ್ನು ಪಡೆದುಕೊಂಡಿಲ್ಲ. ಹಾಗಾಗಿ, ಕೂಡಲೇ ಇವುಗಳ ವಿರುದ್ಧ ಕ್ರಮಕೈಗೊಂಡು, ವರದಿಯನ್ನು ಜ.20ರೊಳಗಾಗಿ ಮಂಡಳಿಗೆ ಸಲ್ಲಿಸಬೇಕು ಎಂದು ಸಿಪಿಸಿಬಿ ಸೂಚನೆ ನೀಡಿದೆ. 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !