ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈದಾನ ಉಳಿವಿಗೆ ಹೋರಾಟ

Last Updated 23 ಮೇ 2019, 19:14 IST
ಅಕ್ಷರ ಗಾತ್ರ

ಬೆಂಗಳೂರು: ನಂದಿನಿ ಲೇಔಟ್‌ನ ರಾಮಕೃಷ್ಣನಗರ ಮಕ್ಕಳ ಆಟದ ಮೈದಾನ ರಕ್ಷಣಾ ಸಮಿತಿಯು ಆಟದ ಮೈದಾನದ ಉಳಿವಿಗಾಗಿ ‌ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿಗೆ ಕರ್ನಾಟಕರಾಜ್ಯ ರೈತ ಸಂಘ ಬೆಂಬಲ ಸೂಚಿಸಿದೆ.

ಸಂಘದ ಕಾರ್ಯಾಧ್ಯಕ್ಷ ವೀರಸಂಗಯ್ಯ ಗುರುವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು. ‘ಆಟದ ಮೈದಾನದ ರಕ್ಷಣೆಯ ವಿಚಾರವಾಗಿ ರೈತ ಸಂಘದ ಬೆಂಬಲ ಸದಾ ಇರಲಿ ಸ್ಥಳೀಯರಾಜಕಾರಣಿಗಳು ಮಕ್ಕಳ ಆಟದ ಮೈದಾನವನ್ನು ಕಿತ್ತುಕೊಳ್ಳಲು ಮುಂದಾಗಿರುವುದು ವಿಪರ್ಯಾಸ. ಸುತ್ತಮುತ್ತಲಿನ ಪ್ರದೇಶದಲ್ಲಿ ಬೇರಾವುದೇ ಆಟದ ಮೈದಾನವಿಲ್ಲ. ಹಾಗಾಗಿ ಈ ಮೈದಾನವನ್ನು ಶಾಲಾ ಮಕ್ಕಳಿಗೆ ಬಿಟ್ಟುಕೊಡಬೇಕು’ ಎಂದು ಒತ್ತಾಯಿಸಿದರು.

‘ಮಕ್ಕಳು ನಮ್ಮ ದೇಶದ ಭವಿಷ್ಯ. ಆಟದ ಮೈದಾನವನ್ನು ಕಿತ್ತುಕೊಳ್ಳುತ್ತಿರುವುದುದೌರ್ಜನ್ಯ’ ಎಂದುಕರ್ನಾಟಕ ಹಳ್ಳಿ ಮಕ್ಕಳ ಸಂಘದ ಬಾಬು ಬೇಸರ ವ್ಯಕ್ತಪಡಿಸಿದರು.

ನಗರ ಮಕ್ಕಳ ಆಟದ ಮೈದಾನ ರಕ್ಷಣಾ ಸಮಿತಿಯ ಲೋಕೇಶ್ ಬಹುಜನ, ಜ್ಞಾನಮೂರ್ತಿ, ಚಂದ್ರು ಸಂಗೊಳ್ಳಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT