ಮಂಗಳವಾರ, ನವೆಂಬರ್ 19, 2019
29 °C

ಪೊಲೀಸರ ಜನ್ಮದಿನ; ರಜೆ ಜತೆ ಗ್ರೀಟಿಂಗ್

Published:
Updated:

ಬೆಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸರಿಗೆ ತಮ್ಮ ಜನ್ಮದಿನದಂದು ವಾರದ ರಜೆ ಜೊತೆಗೆ ಶುಭಾಶಯದ ಗ್ರೀಟಿಂಗ್ ಸಹ ಸಿಗಲಿದೆ.

ಹುಟ್ಟುಹಬ್ಬ ಆಚರಿಸಿಕೊಳ್ಳುವ ಪೊಲೀಸರಿಗೆ ನೀಡುವುದಕ್ಕಾಗಿ ಕಮಿಷನರ್ ಭಾಸ್ಕರ್‌ ರಾವ್ ಅವರು ತಮ್ಮ ಹಸ್ತಾಕ್ಷರವುಳ್ಳ  ಗ್ರೀಟಿಂಗ್‌ಗಳನ್ನು ಸಿದ್ಧಪಡಿಸಿದ್ದಾರೆ. ಅವುಗಳನ್ನು ಪೊಲೀಸರಿಗೆ ನೀಡಿ ತಮ್ಮ ಪರವಾಗಿ ಶುಭಾಶಯ ಕೋರುವಂತೆ ಎಲ್ಲ ಠಾಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

‘ಕರ್ತವ್ಯದ ಒತ್ತಡವಿದ್ದರೂ ಪೊಲೀಸರಿಗೆ ಹುಟ್ಟುಹಬ್ಬದಂದು ಕುಟುಂಬ ಜೊತೆ ಸಂತೋಷದಿಂದ ಸಮಯ ಕಳೆಯಲು ಕಡ್ಡಾಯವಾಗಿ ವಾರದ ರಜೆ ನೀಡಬೇಕು’ ಎಂದೂ ಭಾಸ್ಕರ್ ರಾವ್ ಹೇಳಿದ್ದಾರೆ.

‘ಈ ಶುಭ ದಿನದಂದು ದೇವರು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಆರೋಗ್ಯ, ಸಮೃದ್ಧಿ ಹಾಗೂ ಶಾಂತಿಯನ್ನು ನೀಡಲೆಂದು ಹಾರೈಸುತ್ತೇನೆ– ಎಂದೆಂದಿಗೂ ನಿಮ್ಮೊಂದಿಗೆ ಭಾಸ್ಕರ್ ರಾವ್’ ಎಂದು ಗ್ರೀಟಿಂಗ್‌ನಲ್ಲಿ ಬರೆಯಲಾಗಿದೆ.

ಪ್ರತಿಕ್ರಿಯಿಸಿ (+)