ದರೋಡೆಗೆ ‘ಪೊಲೀಸ್‌’ ವೇಷ

7
ವಾಹನ ತಪಾಸಣೆ ನೆಪದಲ್ಲಿ ಅಪಹರಿಸಿ ಸುಲಿಗೆ

ದರೋಡೆಗೆ ‘ಪೊಲೀಸ್‌’ ವೇಷ

Published:
Updated:

ಬೆಂಗಳೂರು: ಪೊಲೀಸರ ವೇಷದಲ್ಲಿ ಮೂವರು ಸ್ನೇಹಿತರನ್ನು ಅಪಹರಿಸಿದ್ದ ದರೋಡೆಕೋರರು, ಚಿನ್ನಾಭರಣ, ಮೊಬೈಲ್ ಸೇರಿದಂತೆ ₹60 ಸಾವಿರ ಮೌಲ್ಯದ ವಸ್ತುಗಳನ್ನು ಸುಲಿಗೆ ಮಾಡಿದ್ದಾರೆ.

ಆ ಸಂಬಂಧ ಸಲೀಂ ಪಾಷಾ ಎಂಬುವರು ಕೊತ್ತನೂರು ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು, ಘಟನಾ ಸ್ಥಳದ ಬಳಿಯ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ.

‘ಕೆ.ಜಿ.ಹಳ್ಳಿಯ ವೆಂಕಟೇಶಪುರದ ನಿವಾಸಿಯಾದ ಸಲೀಂ ಪಾಷಾ, ತಮ್ಮ ಸ್ನೇಹಿತರಾದ ಯಾಸಿನ್ ಷರೀಫ್ ಹಾಗೂ ಸಿದ್ದಿಕ್ ಜೊತೆಯಲ್ಲಿ ಡಿ. 30ರಂದು ಮಧ್ಯಾಹ್ನ 4 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಹೊರಟಿದ್ದಾಗ ದರೋಡೆಕೋರರು ಅವರೆಲ್ಲರನ್ನೂ  ಅಪಹರಿಸಿದ್ದರು’ ಎಂದು ಪೊಲೀಸರು ಹೇಳಿದರು.

ವಾಹನ ತಪಾಸಣೆಗಾಗಿ ತಡೆದರು: ‘ಮೂವರು ಬೈಕ್‌ನಲ್ಲಿ ಹೊರಟಿದ್ದೆವು. ಬಿಳಿ ಶಿವಾಲೆ ಕೆರೆ ಜಾಗದ ಮುಖ್ಯರಸ್ತೆಯಲ್ಲಿರುವ ಕ್ವಿಕ್ ಅರ್ಥ್‌ ಬಳಿ ಬೈಕ್‌ ತಡೆದಿದ್ದ ಇಬ್ಬರು, ‘ನಾವು ಕ್ರೈಂ ಪೊಲೀಸರು. ನಿಮ್ಮ ವಾಹನದ ದಾಖಲೆ ತೋರಿಸಿ’ ಎಂದು ಕೇಳಿದ್ದರು. ದಾಖಲೆ ತೋರಿಸುತ್ತಿದ್ದಂತೆ ‘ಮೂವರೂ ಪೊಲೀಸ್‌ ಠಾಣೆಗೆ ಬನ್ನಿ’ ಎಂದು ಹೇಳಿ ನಮ್ಮನ್ನು ಹೊರಮಾವು ಬಳಿಯ ಜಾಗ
ವೊಂದಕ್ಕೆ ಕರೆದೊಯ್ದಿದ್ದರು’ ಎಂದು ಸಲೀಂ ಪಾಷಾ ದೂರಿನಲ್ಲಿ ತಿಳಿಸಿದ್ದಾರೆ.

‘ಆ ಜಾಗದಲ್ಲಿದ್ದ 8 ಮಂದಿ, ನಮ್ಮನ್ನು ಸುತ್ತುವರಿದಿದ್ದರು. ನಂತರ, ರಾಂಪುರ ಬಳಿಯ ಚಹಾ ಅಂಗಡಿಗೆ ಕರೆದೊಯ್ದಿದ್ದರು. ಅಲ್ಲಿಗೆ ಬಂದಿದ್ದ ಮಾರುತಿ ಸ್ವಿಫ್ಟ್‌ ಕಾರಿನಲ್ಲೇ ನಮ್ಮನ್ನು ಅಪಹರಿಸಿಕೊಂಡು ಮಾವಿನ ತೋಟವೊಂದಕ್ಕೆ ಹೋಗಿದ್ದರು. ಪ್ಲಾಸ್ಟಿಕ್‌ ಪೈಪ್‌ಗಳಿಂದ ಹಲ್ಲೆ ಮಾಡಿದ್ದ ಆರೋಪಿಗಳು, ನಮ್ಮ ಚಿನ್ನಾಭರಣ, ಮೊಬೈಲ್‌ಗಳನ್ನು ಕಿತ್ತುಕೊಂಡಿದ್ದರು. ನಂತರ, ಅದೇ ಕಾರಿನಲ್ಲಿ ನಮ್ಮನ್ನು ಬಿದರಹಳ್ಳಿ ಬಳಿ ರಾತ್ರಿ 11.30 ಗಂಟೆ ಸುಮಾರಿಗೆ ಬಿಟ್ಟು ಹೋದರು’ ಎಂದು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !