ದಾಬಸ್‌ಪೇಟೆ: ವೈದ್ಯರ ಕೊರತೆ, ರೋಗಿಗಳು ಹೈರಾಣ!

7

ದಾಬಸ್‌ಪೇಟೆ: ವೈದ್ಯರ ಕೊರತೆ, ರೋಗಿಗಳು ಹೈರಾಣ!

Published:
Updated:

ದಾಬಸ್‌ಪೇಟೆ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದ್ದು, ಸಕಾಲಕ್ಕೆ ಚಿಕಿತ್ಸೆ ಸಿಗದೆ ರೋಗಿಗಳು ಹೈರಾಣಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 4 ಇಲ್ಲಿಯೇ ಹಾದು ಹೋಗಿರುವುದರಿಂದ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬೆಳಿಗ್ಗೆ ಹಾಗೂ ರಾತ್ರಿ ಪಾಳಿಯಲ್ಲಿ ಒಬ್ಬ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಹಿಳಾ ವೈದ್ಯರ ಹುದ್ದೆ ಖಾಲಿ ಇದೆ. ಬೆಳಿಗ್ಗೆ ಒಬ್ಬರೇ ವೈದ್ಯರು ನೂರಾರು ರೋಗಿಗಳನ್ನು ತಪಾಸಣೆ ಮಾಡಿ ಚಿಕಿತ್ಸೆ ಕೊಡುವುದಕ್ಕೆ ಕಷ್ಟವಾಗುತ್ತಿದೆ. ರೋಗಿಗಳು ಸರತಿ ಸಾಲಿನಲ್ಲಿ ಅರ್ಧ ತಾಸು ಕಾಯಬೇಕಾದ ಪರಿಸ್ಥಿತಿ ಬಂದಿದೆ ಎಂದು ತಪಾಸಣೆಗೆ ಬಂದವರೊಬ್ಬರು ತಿಳಿಸಿದರು. ದಿನವೂ ಅಪಘಾತದಿಂದ ಗಾಯಗೊಂಡವರು ಆಸ್ಪತ್ರೆಗೆ ಬರುವುದರಿಂದ, ಅವರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಕೊಡಲು ವೈದ್ಯರು ಹೋದರೆ, ಉಳಿದ ರೋಗಿಗಳು ಯಾತನೆ ಪಡಬೇಕಾಗುತ್ತದೆ ಎಂದರು.

’ಆಸ್ಪತ್ರೆಗೆ ಮಹಿಳಾ ವೈದ್ಯರೊಬ್ಬರನ್ನು ನಿಯೋಜಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಶೀಘ್ರ ನಿಯೋಜನೆ ಮಾಡುವ ಭರವಸೆ ನೀಡಿದ್ದಾರೆ’ ಎಂದರು ಆಡಳಿತ ವೈದ್ಯಾಧಿಕಾರಿ ಡಿ.ಆನಂದ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !