ಪ್ರತಿಭಟನೆ: ನಗರದಲ್ಲಿ ರಸ್ತೆ ತಡೆ ಚಳವಳಿ ಎಚ್ಚರಿಕೆ

4

ಪ್ರತಿಭಟನೆ: ನಗರದಲ್ಲಿ ರಸ್ತೆ ತಡೆ ಚಳವಳಿ ಎಚ್ಚರಿಕೆ

Published:
Updated:

ಬೆಂಗಳೂರು: ರಾಷ್ಟ್ರವ್ಯಾಪಿ ಕರೆ ನೀಡಿರುವ ಸರಕು ಸಾಗಣೆ ವಾಹನಗಳ ಮುಷ್ಕರ ಮುಂದುವರಿದಿದ್ದು, ನಗರದ ಲಾರಿ ಮಾಲೀಕರು ಯಶವಂತಪುರ ಎಪಿಎಂಸಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಲಾರಿ ಮಾಲೀಕರು ಮತ್ತು ಏಜೆಂಟರ ಒಕ್ಕೂಟದ ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 

‘ಟೋಲ್ ರದ್ದುಪಡಿಸಬೇಕು, ತೈಲ ದರ ಇಳಿಕೆ ಮಾಡಬೇಕು ಹಾಗೂ ವಾಹನಗಳ ಥರ್ಡ್‌ ಪಾರ್ಟಿ ವಿಮೆ ಕಂತಿನ ದರ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿ ಮುಷ್ಕರ ಆರಂಭಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಬೇಡಿಕೆಗಳು ಈಡೇರದಿದ್ದರೆ ರಸ್ತೆ ತಡೆ ಚಳವಳಿ ನಡೆಸಲಾಗುವುದು’ ಎಂದು ಒಕ್ಕೂಟದ ಅಧ್ಯಕ್ಷ ಜಿ.ಆರ್‌.ಷಣ್ಮುಗಪ್ಪ ಎಚ್ಚರಿಕೆ ನೀಡಿದರು.

‘ದೇಶದಲ್ಲಿ 461 ಟೋಲ್‌ ಗೇಟ್‌ಗಳಿವೆ. ಒಪ್ಪಂದದ ಅವಧಿ ಮುಗಿದಿದ್ದರೂ ಹಲವು ಟೋಲ್‌ಗೇಟ್‌ಗಳಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ. ಇದರಿಂದ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !