ಪಿಯು: ಬೆಂಗಳೂರಿಗೆ ಹಿನ್ನಡೆ

ಬುಧವಾರ, ಏಪ್ರಿಲ್ 24, 2019
27 °C

ಪಿಯು: ಬೆಂಗಳೂರಿಗೆ ಹಿನ್ನಡೆ

Published:
Updated:

ಬೆಂಗಳೂರು: ಬೆಂಗಳೂರಿನಲ್ಲಿ ಉತ್ತಮ ಕಾಲೇಜುಗಳು ಮತ್ತು ಕೋಚಿಂಗ್‌ ವ್ಯವಸ್ಥೆ ಇದ್ದರೂ ಪಿಯು ಪರೀಕ್ಷೆಯ ಜಿಲ್ಲಾವಾರು ಫಲಿತಾಂಶದಲ್ಲಿ ಬೆಂಗಳೂರು ಮೊದಲ ಐದರಲ್ಲಿ ಸ್ಥಾನಗಳಿಸಲು ವಿಫಲವಾಗಿದೆ.

ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಮೊದಲ ಮೂರು ಸ್ಥಾನದಲ್ಲಿವೆ. ಬೆಂಗಳೂರು ದಕ್ಷಿಣ ಎಂಟನೇ (ಶೇ 74.25) ಸ್ಥಾನ ಪಡೆದಿದ್ದರೆ, ಬೆಂಗಳೂರು ಗ್ರಾಮಾಂತರ 10ನೇ ಸ್ಥಾನ (ಶೇ 72.91) ಮತ್ತು ಬೆಂಗಳೂರು ಉತ್ತರ (ಶೇ. 72.68) 11ನೇ ಸ್ಥಾನ ಪಡೆದಿದೆ. ಅಚ್ಚರಿ ಎಂದರೆ, ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವ ಬಾಗಲಕೋಟೆ ಜಿಲ್ಲೆ (ಶೇ74.26) ಏಳನೇ ಸ್ಥಾನಕ್ಕೇರುವ ಮೂಲಕ ಬೆಂಗಳೂರನ್ನು ಹಿಂದಕ್ಕೆ ಹಾಕಿದೆ.

‘ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಇಂಟಿಗ್ರೇಟೆಡ್‌ ಹೆಸರಿನಲ್ಲಿ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರ
ಲಾಗುತ್ತಿದೆ. ಇದರಿಂದಾಗಿ ಪ್ರತಿಭಾವಂತರಾದರೂ ಉತ್ತಮ ಸಾಧನೆ ತೋರಲು ಸಾಧ್ಯವಾಗುತ್ತಿಲ್ಲ’ ಎಂದು ಕರ್ನಾಟಕ ಪದವಿಪೂರ್ವ ಕಾಲೇಜುಗಳ ಅಧ್ಯಾಪಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದರು.

‘ಇಂತಹ ಕಾಲೇಜುಗಳಲ್ಲಿ ನೀಟ್‌ ಮತ್ತು ಸಿಇಟಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕೋರ್‌ ವಿಷಯಗಳಲ್ಲಿ ಉತ್ತೀರ್ಣರಾದರೂ ಭಾಷಾ ವಿಷಯಗಳಲ್ಲಿ ಉತ್ತೀರ್ಣರಾಗುವುದಿಲ್ಲ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !