ಪಬ್‌ಗಳಲ್ಲಿ ಅಬ್ಬರದ ಸಂಗೀತ; ಡಿಸಿಪಿಗೆ ದೂರು

7

ಪಬ್‌ಗಳಲ್ಲಿ ಅಬ್ಬರದ ಸಂಗೀತ; ಡಿಸಿಪಿಗೆ ದೂರು

Published:
Updated:

ಬೆಂಗಳೂರು: ‘ಯುಬಿ ಸಿಟಿ ಸೇರಿದಂತೆ ಸುತ್ತಮುತ್ತಲ ರಸ್ತೆಗಳ ಪಬ್‌ಗಳಲ್ಲಿ ತಡರಾತ್ರಿವರೆಗೂ ವಹಿವಾಟು ನಡೆಯುತ್ತಿದ್ದು, ಸಂಗೀತದ ಅಬ್ಬರದಿಂದ ನಮ್ಮ ನೆಮ್ಮದಿ ಹಾಳಾಗುತ್ತಿದೆ’ ಎಂದು ಕೆಲವರು ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜ್ ಅವರಿಗೆ ಗುರುವಾರ ದೂರು ಕೊಟ್ಟಿದ್ದಾರೆ.

ಡಿಸೋಜಾ ಲೇಔಟ್, ವಿಠ್ಠಲ್ ಮಲ್ಯ ರಸ್ತೆ, ವಾಲ್ಟನ್ ರಸ್ತೆ, ಲ್ಯಾವೆಲ್ಲೆ ರಸ್ತೆ ನಿವಾಸಿಗಳು ದೂರು ಕೊಟ್ಟಿದ್ದು, ಈ ಬಗ್ಗೆ ಕೆಲ ಪಬ್‌ಗಳಿಗೆ ನೋಟಿಸ್ ನೀಡಲಾಗಿದೆ ಎಂದು ಕಬ್ಬನ್‌ಪಾರ್ಕ್ ಪೊಲೀಸರು ಹೇಳಿದ್ದಾರೆ.

‘ರಾತ್ರಿ 2 ಗಂಟೆವರೆಗೆ ಜೋರಾದ ಸಂಗೀತ ಇರುತ್ತದೆ. ಇದರಿಂದ ನಾವು ನೆಮ್ಮದಿಯಾಗಿ ಇರಲು ಆಗುತ್ತಿಲ್ಲ. ಪಬ್‌ಗಳ ಮೇಲೆ ದಾಳಿ ನಡೆಸಿ ಸಂಗೀತ ಪರಿಕರಗಳನ್ನು ಜಪ್ತಿ ಮಾಡಿ’ ಎಂದು ಗಾರ್ಡನ್‌ ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘ ಮನವಿ ಮಾಡಿದೆ.

‘ಪಬ್‌ಗಳಿಗೆ ಬರುವ ಗ್ರಾಹಕರು, ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುತ್ತಾರೆ. ಪೊಲೀಸರಿಗೆ ಹಲವು ಸಲ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ’ ಎಂದು ಕೆಲವರು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !