ಮಾರ್ಚ್‌ 10ಕ್ಕೆ ಪಲ್ಸ್‌ ಪೋಲಿಯೊ

ಶನಿವಾರ, ಮೇ 25, 2019
27 °C

ಮಾರ್ಚ್‌ 10ಕ್ಕೆ ಪಲ್ಸ್‌ ಪೋಲಿಯೊ

Published:
Updated:

ಬೆಂಗಳೂರು: ರಾಷ್ಟ್ರೀಯ ಲಸಿಕಾ ದಿನವಾದ ಮಾರ್ಚ್ 10 ರಂದು ರಾಜ್ಯಾದಾದ್ಯಂತ ಐದು ವರ್ಷದೊಳಗಿನ ಮಕ್ಕ
ಳಿಗೆ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯ
ದರ್ಶಿ ಪಿ.ರವಿಕುಮಾರ್‌ ತಿಳಿಸಿದರು.

ವಿಧಾನಸೌಧದಲ್ಲಿ ಶನಿವಾರ ನಡೆದ ಸಭೆಯಲ್ಲಿ ಅವರು ಮಾತನಾಡಿ, ‘ಪ್ರತಿ ವರ್ಷ ಎರಡು ಹಂತಗಳಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು. ಈ ಸಲ ಒಂದು ಬಾರಿ ಮಾತ್ರ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಕಾರ್ಯಕ್ರಮದಲ್ಲಿ ಹನಿ ಹಾಕಲು 32,571 ಬೂತ್‍ಗಳನ್ನು ತೆರೆಯಲಾಗಿದೆ. ಅಂದಾಜು 64,85,980 ಮಕ್ಕಳಿಗೆ 1,10,351 ಲಸಿಕಾ ಕಾರ್ಯಕರ್ತೆಯರು ಲಸಿಕೆ ಹಾಕುವರು. ಅಲ್ಲದೆ 6,047 ಮೇಲ್ವಿಚಾರಕರು, 952 ಸಂಚಾರಿ ತಂಡ ಹಾಗೂ 2170 ಟ್ರಾನ್ಸಿಟ್ ತಂಡಗಳು  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !