‘ಪ್ಯೂಪಾ– 2018’ ಪ್ರದರ್ಶನ: ಆಲೋಚನೆ ನವೀನ ಗಮನ ಸೆಳೆದ ಉತ್ಪನ್ನ

7
ವಿವಿಧ ಕಾಲೇಜುಗಳ 350 ತಂಡಗಳು ಭಾಗಿ

‘ಪ್ಯೂಪಾ– 2018’ ಪ್ರದರ್ಶನ: ಆಲೋಚನೆ ನವೀನ ಗಮನ ಸೆಳೆದ ಉತ್ಪನ್ನ

Published:
Updated:
Deccan Herald

ಹುಬ್ಬಳ್ಳಿ: ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಸಿಎಲ್‌ಐಟಿಇ ಕಟ್ಟಡದಲ್ಲಿ ಶನಿವಾರ ನಡೆದ ಕಾಲೇಜು ವಿದ್ಯಾರ್ಥಿಗಳ ತಾಂತ್ರಿಕ ಉತ್ಪನ್ನ ಪ್ರದರ್ಶನ ‘ಪ್ಯೂಪಾ 2018’ ಗಮನ ಸೆಳೆಯಿತು.

ಕೆಎಲ್‌ಇ ತಂತ್ರಜ್ಞಾನ, ನಾವೀನ್ಯತೆ ಹಾಗೂ ಉದ್ಯಮ ಕೇಂದ್ರದ (ಸಿಟಿಐಇ) ಆಯೋಜಿಸಿದ್ದ ಈ ಪ್ರದರ್ಶನದಲ್ಲಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳ ಸುಮಾರು 350 ತಂಡಗಳು ಭಾಗವಹಿಸಿ ಕೌಶಲ ಪ್ರದರ್ಶಿಸಿದವು. ಒಂದಕ್ಕಿಂತ ಒಂದು ಮಾದರಿಗಳು ವಿಶೇಷ ಎನಿಸಿದವು.

ವಿಜ್ಞಾನ ಮಾದರಿ ತಯಾರಿಸುವುದಕ್ಕಿಂತ ಇದು ಸ್ವಲ್ಪ ಭಿನ್ನವಾಗಿತ್ತು. ಮಾರಾಟದ ಉದ್ದೇಶವನ್ನೇ ಪ್ರಮುಖವಾಗಿಟ್ಟುಕೊಂಡು ಉತ್ಪನ್ನಗಳನ್ನು ತಯಾರಿಸಲಾಗಿತ್ತು. ಹೆಲ್ಮೆಟ್ ಮೇಲೆ ಸೋಲಾರ್ ಪ್ಯಾನಲ್ ಅಳವಡಿಸಿ ಅದರಿಂದ ಉತ್ಪತ್ತಿಯಾಗುವ ವಿದ್ಯುತ್‌ನಿಂದ ಮೊಬೈಲ್ ಫೋನ್ ಬ್ಯಾಟರಿ ಚಾರ್ಜ್ ಮಾಡಿಕೊಳ್ಳುವುದು, ಕಸದ ಬುಟ್ಟಿ ತುಂಬಿದ ನಂತರ ಸಂಬಂಧಿಸಿದವರಿಗೆ ಸಂದೇಶ ಬರುವಂತಹ ತಂತ್ರಜ್ಞಾನ, ಸ್ವಯಂಚಾಲಿತ ಹುಲ್ಲು ಕತ್ತರಿಸುವ ಯಂತ್ರಗಳು ವಿದ್ಯಾರ್ಥಿಗಳ ಹೊಸ ಆಲೋಚನೆಯನ್ನು ಬಿಂಬಿಸುತ್ತಿದ್ದವು.

ಶಾಲಾ ವಿದ್ಯಾರ್ಥಿಗಳ ಕೆಲವು ತಂಡಗಳು ಸಹ ಪ್ಯೂಪಾದಲ್ಲಿ ಪಾಲ್ಗೊಂಡಿದ್ದವು. ಪರಿಸರ ಸ್ನೇಹಿ ಕೈಚೀಲ, ತ್ಯಾಜ್ಯದಿಂದ ತಯಾರಿಸಿದ ಪೇಪರ್ ವೆಯ್ಟ್, ಅಲಂಕಾರಿಕ ವಸ್ತುಗಳನ್ನು ಅವರು ಪ್ರದರ್ಶಿಸಿದರು. ಭಾರಿ ಸಂಖ್ಯೆಯ ವಿದ್ಯಾರ್ಥಿಗಳು ಈ ಪ್ರದರ್ಶನವನ್ನು ವೀಕ್ಷಿಸಿದರು. 350 ಉತ್ಪನ್ನಗಳಿದ್ದ ಕಾರಣ, ಎಲ್ಲದರ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಅಸಾಧ್ಯವಾಗಿತ್ತು. ತಮಗೆ ಆಸಕ್ತಿ ಎನಿಸಿದ ಮಾದರಿಗಳ ಬಗ್ಗೆ ಮಾತ್ರ ವಿವರಣೆ ಕೇಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !