ಬೆಳಿಗ್ಗೆ ಮಹಾತ್ಮ ಗಾಂಧಿ ರಸ್ತೆವರೆಗೆ ಮಾತ್ರ ಸಂಚರಿಸಿದ ಮೆಟ್ರೊ ರೈಲು

7
7 ಗಂಟೆಯಿಂದ ಬೈಯಪ್ಪನಹಳ್ಳಿಗೆ ರೈಲು ಸಂಚಾರ ಆರಂಭ

ಬೆಳಿಗ್ಗೆ ಮಹಾತ್ಮ ಗಾಂಧಿ ರಸ್ತೆವರೆಗೆ ಮಾತ್ರ ಸಂಚರಿಸಿದ ಮೆಟ್ರೊ ರೈಲು

Published:
Updated:

ಬೆಂಗಳೂರು: ನಮ್ಮ ಮೆಟ್ರೊ ನೇರಳೆ ಮಾರ್ಗದ ರೈಲುಗಳು ಬೆಳಿಗ್ಗೆ 7 ಗಂಟೆ ವರೆಗೆ ಮೈಸೂರು ರಸ್ತೆಯಿಂದ ಮಹಾತ್ಮ ಗಾಂಧಿ ರಸ್ತೆ ವರೆಗೆ ಮಾತ್ರ ಸಂಚರಿಸಿದ್ದರಿಂದ ಅನೇಕ ಪ್ರಯಾಣಿಕರು ತೊಂದರೆಗೀಡಾದರು. ಬೆಳಿಗ್ಗೆ 7 ಗಂಟೆಯ ಬಳಿಕ ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿಯವರೆಗೆ ರೈಲು ಸಂಚಾರ ಆರಂಭವಾಗಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ತಿಳಿಸಿದೆ.

ನಗರದ ಟ್ರಿನಿಟಿ ವೃತ್ತದ ಸಮೀಪ ಮೆಟ್ರೊ ಸೇತುವೆಯಲ್ಲಿ ಕಂಡುಬಂದ ಸಮಸ್ಯೆಯಿಂದಾಗಿ ಬುಧವಾರ ಮೆಟ್ರೊ ರೈಲು ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಬೆಳಿಗ್ಗೆ 6ರಿಂದ 8.15ರವರೆಗೆ ಸುಮಾರು 7 ಟ್ರಿಪ್‌ಗಳಲ್ಲಿ ವ್ಯತ್ಯಯ ಉಂಟಾಗಿತ್ತು. ಮೆಟ್ರೊ ಸೇತುವೆಯ ವಯಾಡಕ್ಟ್‌ ಕಾಂಕ್ರಿಟ್‌ನಲ್ಲಿ ಬಿರುಕು ಮೂಡಿದ್ದರಿಂದ (ಹನಿಕಾಂಬ್ – ಕಾಂಕ್ರಿಟ್‌ ಪದರ ಟೊಳ್ಳಾಗುವುದು) ಈ ಮಾರ್ಗದಲ್ಲಿ ಬುಧವಾರದಿಂದ ಮೆಟ್ರೊ ರೈಲುಗಳ ವೇಗವನ್ನು ತಗ್ಗಿಸಲಾಗಿದೆ.

ಸಮಸ್ಯೆ ಇರುವುದು ಬೆಳಕಿಗೆ ಬಂದ ತಕ್ಷಣವೇ ತುರ್ತು ನಿರ್ವಹಣಾ ಕಾಮಗಾರಿಯನ್ನು ಆರಂಭಿಸಲಾಗಿದೆ ಬಿಎಂಆರ್‌ಸಿಎಲ್ ತಿಳಿಸಿದೆ.

ಇದನ್ನೂ ಓದಿ: ಟ್ರಿನಿಟಿ ಸಮೀಪ ಮೆಟ್ರೊ ಸೇತುವೆಯಲ್ಲಿ ಸಮಸ್ಯೆ: ರೈಲು ಸಂಚಾರ ವ್ಯತ್ಯಯ

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !