‘ಮೋದಿ ಸಂಸಾರಿಯಾಗಿದ್ದರೆ ಕುಟುಂಬ ರಾಜಕಾರಣ ಮಾಡುತ್ತಿದ್ದರು’

ಗುರುವಾರ , ಏಪ್ರಿಲ್ 25, 2019
21 °C

‘ಮೋದಿ ಸಂಸಾರಿಯಾಗಿದ್ದರೆ ಕುಟುಂಬ ರಾಜಕಾರಣ ಮಾಡುತ್ತಿದ್ದರು’

Published:
Updated:
Prajavani

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಸಂಸಾರಿಯಾಗಿದ್ದರೆ, ಅವರೂ ಕುಟುಂಬ ರಾಜಕಾರಣ ಮಾಡುತ್ತಿದ್ದರು. ಆದರೆ ಅವರು ಬ್ರಹ್ಮಚಾರಿಯೂ ಅಲ್ಲ, ಸಂಸಾರಿಯೂ ಅಲ್ಲ’ ಎಂದು ಸಾಹಿತಿ ಡಾ.ಪಿ.ವಿ.ನಾರಾಯಣ ಲೇವಡಿ ಮಾಡಿದರು.

ಸದ್ಭಾವನಾ ಪ್ರತಿಷ್ಠಾನದ ವತಿಯಿಂದ ನಗರದಲ್ಲಿ ಬುಧವಾರ ಆಯೋಜಿಸಲಾಗಿದ್ದ ‘ಲೋಕಸಭಾ ಚುನಾವಣೆ ಕರ್ನಾಟಕದ ಜನಪ್ರಣಾಳಿಕೆ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಹೀಗೆ ಮಾತನಾಡಿದರೆ ಕಮ್ಯುನಿಸ್ಟರು ಎನ್ನುತ್ತಾರೆ. ಪಾಪಿಷ್ಟರಾಗುವುದಕ್ಕಿಂತ ಕಮ್ಯುನಿಸ್ಟರಾಗುವುದು ಉತ್ತಮ’ ಎಂದರು.

‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷ ಯುದ್ಧ, ಧರ್ಮ ಮತ್ತು ದೇವರ ಹೆಸರಿನಲ್ಲಿ ದೇಶವನ್ನು ಆಳುತ್ತಿದೆಯೇ ಹೊರತು ಸ್ವಂತ ಬಲದಿಂದಲ್ಲ’ ಎಂದು ಅಭಿಪ್ರಾಯಪಟ್ಟರು.

‘ಯುವಕರ ಮನಸ್ಸಿನಲ್ಲಿ ಹುಸಿ ಕನಸುಗಳನ್ನು ಭಿತ್ತಿ, ಭ್ರಮಾತ್ಮಕತೆಯನ್ನು ಸೃಷ್ಟಿಸಿ, ಉನ್ಮಾದದಲ್ಲಿ ತೇಲಾಡುವಂತೆ ಮಾಡುತ್ತಿದೆ’ ಎಂದು ಆರೋಪಿಸಿದರು.

ಸಾಮೂಹಿಕ ಆತ್ಮಹತ್ಯೆ: ‘ಮತದಾರರಿಗೆ ಆಯ್ಕೆಗಳೇ ಇಲ್ಲದಂತಾಗಿದೆ. ಒಂದು ಪಕ್ಷ ವಂಶ ರಾಜಕಾರಣದಿಂದ ನರಳುತ್ತಿದ್ದರೆ, ಇನ್ನೊಂದು ವಿಭೂತಿ ಪೂಜೆಯ ಪಕ್ಷವಾಗಿದೆ. ಬಿಜೆಪಿ ನಾಯಕರು ಮೋದಿಗೆ ವೋಟು ಕೊಡಿ ಎನ್ನುವ ಮೂಲಕ ಸಾಮೂಹಿಕ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ’ ಎಂದು ಅವರು ಕುಟುಕಿದರು.

‘ದೇಶದ ಶೇ 90ರಷ್ಟು ಆಸ್ತಿ ಮುಖೇಶ್‌ ಅಂಬಾನಿಯವರಂಥ 9 ಜನರ ಕೈಯಲ್ಲಿದೆ. ಅವರು ಆಲದ ಮರಗಳಿದ್ದಂತೆ, ಯಾರನ್ನೂ ಬೆಳೆಯಲು ಬಿಡುವುದಿಲ್ಲ. ಅನ್ನ ದುಡಿಮೆಯಿಂದ ಬರಬೇಕು. ದುಡಿಯುವ ಸಾಮರ್ಥ್ಯ ಇಲ್ಲದವನಿಗೆ ತಿನ್ನುವ ಅಧಿಕಾರ ಇರುವುದಿಲ್ಲ. ಆದ್ದರಿಂದ ಕೆಲಸ ಹಾಗೂ ಆರೋಗ್ಯ ಸೇವೆಗಳನ್ನು ಒದಗಿಸುವವರಿಗೆ ಮತ ನೀಡಬೇಕು’ ಎಂದರು.

ಬನವಾಸಿ ಬಳಗದ ಜಿ.ಆನಂದ್‌, ‘ಈ ದೇಶದ ಪ್ರತಿ ಪ್ರಜೆಯೂ ದೇಶಪ್ರೇಮಿಯೇ, ಹೊಣೆಗಾರಿಕೆಯುಳ್ಳ ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕು. ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುವ ಮೂಲಕ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಅಧಿಕಾರ ಕೊಡಬೇಕು. ಕಾಂಗ್ರೆಸ್‌ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಇದಕ್ಕೆ ಆದ್ಯತೆ ನೀಡಿದೆ’ ಎಂದರು.

ಬರಹ ಇಷ್ಟವಾಯಿತೆ?

 • 18

  Happy
 • 2

  Amused
 • 0

  Sad
 • 1

  Frustrated
 • 11

  Angry

Comments:

0 comments

Write the first review for this !