ಗೌಡರ ಬೆನ್ನಿಗೆ ಚೂರಿ ಹಾಕಿದ್ದು ಸಿದ್ದರಾಮಯ್ಯ: ಆರ್‌.ಅಶೋಕ್‌

ಶನಿವಾರ, ಏಪ್ರಿಲ್ 20, 2019
28 °C

ಗೌಡರ ಬೆನ್ನಿಗೆ ಚೂರಿ ಹಾಕಿದ್ದು ಸಿದ್ದರಾಮಯ್ಯ: ಆರ್‌.ಅಶೋಕ್‌

Published:
Updated:

ಬೆಂಗಳೂರು: ‘ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಎ. ಮಂಜು ಬಗ್ಗೆ ಟೀಕೆ ಮಾಡುವ ನೈತಿಕ ಹಕ್ಕಿಲ್ಲ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಬೆನ್ನಿಗೆ ಚೂರಿ ಹಾಕಿದವರು ಸಿದ್ದರಾಮಯ್ಯ’ ಎಂದು ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಆರ್‌.ಅಶೋಕ್‌ ಆರೋಪಿಸಿದರು.

ನಗರದಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಈ ಮೊದಲು ಜೆಡಿಎಸ್‌ನಲ್ಲಿ ಇದ್ದವರು. ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದು ದೇವೇಗೌಡರು. ಗೌಡರಿಗೆ ಧಿಕ್ಕಾರ ಕೂಗಿ, ರಸ್ತೆಯಲ್ಲಿ ಚಪ್ಪಲಿ ಹಾರ ಹಾಕಿಸಿಲ್ಲವೇ? ಆಗ ನೈತಿಕತೆ ಎಲ್ಲಿಗೆ ಹೋಗಿತ್ತು’ ಎಂದು ಅವರು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ಹಾಳು ಮಾಡಿ ಕಾಂಗ್ರೆಸ್ ಸೇರಿದ್ದಾರೆ. ಅದನ್ನೆಲ್ಲಾ ಮರೆತು ಬಿಟ್ಟಿದ್ದಾರಾ. ಎ.ಮಂಜು ಮೂಲ ಬಿಜೆಪಿಗರು. ಈಗ ಮರಳಿ ಬಿಜೆಪಿ ಸೇರಿದ್ದಾರೆ’ ಎಂದರು.

‘ಡಿಎನ್‌ಎ, ವಂಶವಾಹಿನಿ ಆಧಾರದಲ್ಲಿ ಟಿಕೆಟ್‌ ಕೊಡಬೇಕು ಎಂದರೆ ಹೇಗೆ? ಹಾಗೆ ಕೊಡುತ್ತಾ ಹೋದರೆ, ಪಕ್ಷದ ಸದಸ್ಯತ್ವದ ರಸೀದಿಗೆ ಬೆಲೆ ಬೇಕಲ್ಲವೇ’ ಎಂಬ ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್‌, ‘ಅನಂತಕುಮಾರ್ ಚೆನ್ನಾಗಿ ಕೆಲಸ ಮಾಡಿದ್ದಾರೆ. ತೇಜಸ್ವಿನಿ ಅನಂತಕುಮಾರ್ ಸಾಮಾಜಿಕ ಕಾರ್ಯ
ಕರ್ತೆ. ಆದರೆ, ಬಿ.ಎಲ್. ಸಂತೋಷ್ ಯಾವ ದೃಷ್ಟಿಕೋನದಿಂದ ಹೇಳಿದ್ದಾರೆ ಗೊತ್ತಿಲ್ಲ’ ಎಂದರು.

‘ಬಿ. ಎಲ್. ಸಂತೋಷ್ ವಿರುದ್ಧ ಯಾರೂ ಕೂಡ ಹೈಕಮಾಂಡ್‌ಗೆ ದೂರು ನೀಡಿಲ್ಲ. ಆರ್‌ಎಸ್‌ಎಸ್ ಯಾವತ್ತೂ ಬಿಜೆಪಿಗೆ ಪತ್ರ ಬರೆದಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !