ಅಕ್ರಮ ವಲಸಿಗರಿಗೆ ರಾಹುಲ್‌ ಏಜೆಂಟ್‌

ಭಾನುವಾರ, ಏಪ್ರಿಲ್ 21, 2019
26 °C
ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಆರೋಪ

ಅಕ್ರಮ ವಲಸಿಗರಿಗೆ ರಾಹುಲ್‌ ಏಜೆಂಟ್‌

Published:
Updated:
Prajavani

ಬೆಂಗಳೂರು: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಆ ಪಕ್ಷದ ನಾಯಕರು ಬಾಂಗ್ಲಾದೇಶದ ಅಕ್ರಮ ವಲಸಿಗರ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಆರೋಪಿಸಿದರು.

ಬಿಜೆಪಿ ರಾಜ್ಯ ಘಟಕದ ಆಶ್ರಯದಲ್ಲಿ ನಗರದಲ್ಲಿ ಬುಧವಾರ ನಡೆದ ‘ರಾಜ್ಯದ ಯುವಕರು, ಐಟಿ ಉದ್ಯೋಗಿಗಳು, ವಿವಿಧ ಕ್ಷೇತ್ರಗಳ ಜತೆಗಿನ ಸಂವಾದ’ದಲ್ಲಿ ಅವರು ಮಾತನಾಡಿದರು.

‘ರೋಹಿಂಗ್ಯಾ ಮುಸ್ಲಿಮರು ಭಾರತದಲ್ಲಿ ವಾಸಿಸಬಹುದು ಹಾಗೂ ಇಲ್ಲಿನ ನಾಗರಿಕತೆ ಪಡೆಯಬಹುದು ಎಂದು ರಾಹುಲ್‌ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ಅವರ ಪರವಾಗಿ ಹೋರಾಟ ನಡೆಸುವುದಿದ್ದರೆ ರಾಹುಲ್‌ ಬರ್ಮಾಕ್ಕೆ ಹೋಗಲಿ’ ಎಂದು ಸವಾಲು ಎಸೆದರು. ‘ಅವರು ಮತ ಪಡೆಯಲು ಈ ರೀತಿ ಮಾಡುತ್ತಿದ್ದಾರೆ. ಅವರಿಗೆ ಸ್ಥಳೀಯರ ಮತ ಪಡೆಯುವ ಶಕ್ತಿ ಇಲ್ಲ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಸ್ಲಿಂ ರಾಷ್ಟ್ರಗಳು ಸಹ ವಿವಾದರಹಿತ ನಾಯಕ ಎಂದು ಒಪ್ಪಿಕೊಂಡಿವೆ. ಭಾರತದ ಮುಸ್ಲಿಮರು ಸಹ ಮೋದಿ ಅವರನ್ನು ತಮ್ಮ ನಾಯಕ ಎಂದು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ವಿರೋಧ ಪಕ್ಷಗಳು ಅಪಪ್ರಚಾರದಲ್ಲಿ ತೊಡಗಿವೆ’ ಎಂದು ಆರೋಪಿಸಿದರು.

ಲೋಕಸಭಾ ಚುನಾವಣೆಯಲ್ಲಿ 10ರಿಂದ 40 ಸ್ಥಾನಗಳನ್ನಷ್ಟೇ ಪಡೆಯಲಿರುವ ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು ಅವರಂತಹ ನಾಯಕರು ಸಹ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಕನಿಷ್ಠ 15 ನಾಯಕರು ‍ಪ್ರಧಾನಿಯಾಗಲು ಹವಣಿಸುತ್ತಿದ್ದಾರೆ. ಆದರೆ, ದೇಶ ಸುಭದ್ರವಾಗಿರಬೇಕು. ಹೀಗಾಗಿ, ಸುಭದ್ರ ಸರ್ಕಾರ ಬೇಕು. ದೇಶದ ಪರ ಗಟ್ಟಿ ನಿರ್ಧಾರ ಕೈಗೊಳ್ಳುವ ನಾಯಕರು ಬೇಕು. ಅಂತಹ ನಾಯಕತ್ವ ಗುಣ ಇರುವುದು ಮೋದಿ ಅವರಿಗೆ ಮಾತ್ರ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !