ಆಯೋಗದ ರಾಯಭಾರಿಗೇ ಇಲ್ಲ ಮತದಾನ ಹಕ್ಕು!

ಶುಕ್ರವಾರ, ಏಪ್ರಿಲ್ 19, 2019
22 °C

ಆಯೋಗದ ರಾಯಭಾರಿಗೇ ಇಲ್ಲ ಮತದಾನ ಹಕ್ಕು!

Published:
Updated:
Prajavani

ಬೆಂಗಳೂರು: ಮಾಜಿ ಕ್ರಿಕೆಟಿಗ, ಚುನಾವಣಾ ಆಯೋಗದ ರಾಯಭಾರಿ ರಾಹುಲ್ ದ್ರಾವಿಡ್ ಈ ಬಾರಿ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ.

ಶಾಂತಿನಗರ ವ್ಯಾಪ್ತಿಯಲ್ಲಿ ವಾಸವಿದ್ದ ರಾಹುಲ್ ದ್ರಾವಿಡ್ ಕುಟುಂಬ ಈಗ ಮತ್ತಿಕೆರೆ ವ್ಯಾಪ್ತಿಯ ಅಶ್ವತ್ಥನಗರಕ್ಕೆ ಸ್ಥಳಾಂತರಗೊಂಡಿದೆ. ದ್ರಾವಿಡ್ ಸಹೋದರ ಶಾಂತಿನಗರ ವ್ಯಾಪ್ತಿಯ ಚುನಾವಣಾಧಿಕಾರಿಗಳಿಗೆ ಫಾರ್ಮ್–7 ನೀಡಿ ಮತದಾರರ ಪಟ್ಟಿಯಿಂದ ಕೈಬಿಡುವಂತೆ ಕೋರಿದ್ದಾರೆ. ಅದರಂತೆ ಹೆಸರು ಕೈಬಿಡಲಾಗಿದೆ ಎಂದು ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್ ತಿಳಿಸಿದರು.

‘ಮತ್ತಿಕೆರೆ ಅಧಿಕಾರಿಗಳು ಪರಿಶೀಲನೆಗೆಂದು ದ್ರಾವಿಡ್ ಅವರ ಮನೆಗೆ ಹೋಗಿದ್ದರು. ಅವರು ವಿದೇಶ ಪ್ರವಾಸದಲ್ಲಿದ್ದರು. ಹೀಗಾಗಿ ಹೆಸರು ಸೇರ್ಪಡೆ ಸಾಧ್ಯವಾಗಿಲ್ಲ. ಮಾರ್ಚ್ 16ಕ್ಕೆ ಮುಂಚೆ ಫಾರ್ಮ್– 6 ನೀಡಿದ್ದರೆ ಹೆಸರು ಸೇರಿಸಬಹುದಿತ್ತು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !