ಗುರುವಾರ , ಅಕ್ಟೋಬರ್ 17, 2019
21 °C
ವಿಶ್ರಾಂತಿ ಕೊಠಡಿ ನಿರ್ವಹಣೆ ಸೇರಿದಂತೆ ವಿವಿಧ ವಿಭಾಗದಲ್ಲಿ ನಿಯೋಜನೆ

ರೈಲ್ವೆ ಸಿಬ್ಬಂದಿಗೆ ಕೌಶಲ ವೃದ್ಧಿ ತರಬೇತಿ

Published:
Updated:

ಬೆಂಗಳೂರು: ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಡಿ ನಗರದ ರೈಲ್ವೆ ನಿಲ್ದಾಣದ 122 ಸಿಬ್ಬಂದಿಗೆ ಕೀಟ ನಿಯಂತ್ರಣ, ಕಸ ವಿಲೇವಾರಿ, ವಿಶ್ರಾಂತಿ ಕೊಠಡಿ ನಿರ್ವಹಣೆ ಸೇರಿದಂತೆ ವಿವಿಧ ವಿಭಾಗದಲ್ಲಿ ನೈಟ್‌ ಫ್ರಾಂಕ್‌ ಸಂಸ್ಥೆ ಕೌಶಲ ತರಬೇತಿ ನೀಡಿದೆ.

ನೈಟ್‌ ಫ್ರಾಂಕ್‌ ಸಂಸ್ಥೆ ಹಾಗೂ ಭಾರತೀಯ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ನಿಗಮ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಸಿಬ್ಬಂದಿಗೆ ಬೆಂಗಳೂರು ನಗರ ರೈಲ್ವೆಯ ವಿಭಾಗೀಯ ವ್ಯವಸ್ಥಾಪಕ ಅಶೋಕ್‌ ಕುಮಾರ್ ವರ್ಮಾ ಪ್ರಮಾಣ ಪತ್ರ ವಿತರಿಸಿದರು. 

‘ರೈಲ್ವೆ ನಿಲ್ದಾಣದ ಸಿಬ್ಬಂದಿಯ ಕೌಶಲ ವೃದ್ಧಿಯಿಂದ ಗುಣಮಟ್ಟದ ಇನ್ನಷ್ಟು ಸೇವೆಗಳನ್ನು ಒದಗಿಸುವ ಜತೆಗೆ ಪ್ರಯಾಣಿಕಸ್ನೇಹಿ ನಿಲ್ದಾಣವನ್ನಾಗಿ ಮಾರ್ಪಡಿಸಬಹುದು. ಅಷ್ಟೇ ಅಲ್ಲ, ದೇಶದಲ್ಲಿಯೇ ಮಾದರಿ ರೈಲ್ವೆ ನಿಲ್ದಾಣವನ್ನಾಗಿಸಲು ಸಾಧ್ಯ’ ಎಂದರು.  

‘ತರಬೇತಿಯಿಂದಾಗಿ ಪ್ರಯಾಣಿಕರಿಗೆ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸುವ ಜತೆಗೆ ಅವರ ಅನುಭವವನ್ನು ಶ್ರೀಮಂತಗೊಳಿಸಬಹುದು. ತರಬೇತಿ ಪಡೆದ ಸಿಬ್ಬಂದಿಯನ್ನು ವಿವಿಧ ವಿಭಾಗಗಳಲ್ಲಿ ನಿಯೋಜಿಸಲಾಗುತ್ತದೆ’ ಎಂದು ಹೇಳಿದರು. 

‌ನೈಟ್‌ ಫ್ರಾಂಕ್‌ನ ಕಾರ್ಯಾಚರಣೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಮ ದೇವಗಿರಿ, ‘ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಗೆ ಕೌಶಲ ವೃದ್ಧಿಗೆ ತರಬೇತಿ ನೀಡಲಾಗುತ್ತದೆ’ ಎಂದರು.=

Post Comments (+)