ಮಾಜಿ ಶಾಸಕ ರಾಜಣ್ಣಗೆ ನೋಟಿಸ್

7

ಮಾಜಿ ಶಾಸಕ ರಾಜಣ್ಣಗೆ ನೋಟಿಸ್

Published:
Updated:
Prajavani

ಬೆಂಗಳೂರು: ‍ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ನಿಮ್ಮ ಮೇಲೆ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂದು ಪ್ರಶ್ನಿಸಿ, ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಅವರಿಗೆ ಕೆಪಿಸಿಸಿ ನೋಟಿಸ್ ಜಾರಿ ಮಾಡಿದೆ.

ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣದಲ್ಲಿ ನಡೆದ ಸಮಾರಂಭವೊಂದರಲ್ಲಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿ, ಮೈತ್ರಿ ಸರ್ಕಾರವನ್ನು ಟೀಕಿಸಿರುವುದು ಸರಿಯಾದ ಕ್ರಮವಲ್ಲ. ಸರ್ಕಾರ ಹಾಗೂ ‍ಪಕ್ಷಕ್ಕೆ ನಿಮ್ಮ ಹೇಳಿಕೆಯಿಂದ ಮುಜುಗರ ಉಂಟಾಗಿದೆ ಎಂದೂ ನೋಟಿಸ್‌ನಲ್ಲಿ ಹೇಳಲಾಗಿದೆ.

ಯಾರೊಬ್ಬರೂ ಬಹಿರಂಗವಾಗಿ ಮಾಧ್ಯಮಗಳಲ್ಲಿ ಟೀಕೆ ಟಿಪ್ಪಣಿ ಮಾಡುವುದಾಗಲಿ, ಪಕ್ಷದ ಘನತೆ ಗೌರವಗಳಿಗೆ ಕುಂದುಂಟಾಗುವಂತೆ ನಡೆದುಕೊಳ್ಳಬಾರದು. ಈ ಹಿಂದೆ ಅನೇಕ ಬಾರಿ ನಿಮಗೆ ಎಚ್ಚರಿಸಿದ್ದರೂ ನೀವು ತಪ್ಪನ್ನು ತಿದ್ದಿಕೊಂಡಿಲ್ಲ. ಮೂರು ದಿನಗಳಲ್ಲಿ ಸಮಜಾಯಿಷಿ ನೀಡಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !