ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಚ್ಚಳಿಯದೇ ಉಳಿಯಲಿ ಅಣ್ಣಾವ್ರ ಬೆಳ್ಳಿ ಹೆಜ್ಜೆ’

Last Updated 24 ಏಪ್ರಿಲ್ 2019, 20:05 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜಕುಮಾರ್ ಕುರಿತಾದ ವಸ್ತು ಸಂಗ್ರಹಾಲಯ ಸ್ಥಾಪನೆಯಾಗಬೇಕು. ಅದು ಅವರ ಸಿನಿ ಪ್ರಯಾಣ ದಾಖಲೆಯಾ
ಗಬೇಕು’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ ಹೇಳಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ನಗರದಲ್ಲಿ ಬುಧವಾರ ಆಯೋಜಿಸಿದ್ದ ವರನಟ ಡಾ.ರಾಜಕುಮಾರ್‌ ಅವರ 91ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನೆನಪಿನ ಕೊಳ ಬತ್ತಿ ಹೋಗುತ್ತಿರುವ ಸಂದರ್ಭದಲ್ಲಿವಸ್ತು ಸಂಗ್ರಹಾಲಯ ಸ್ಥಾಪನೆಯಾದರೆ, ಮುಂದಿನ ತಲೆಮಾರಿಗೆ ಬೆಳ್ಳಿ ಹೆಜ್ಜೆಗಳ ಪರಿಚಯವಾಗಲಿದೆ.ಹಿರಿಯ ಸಾಹಿತಿಗಳು ಹಾಗೂ ಚಿತ್ರೋದ್ಯಮದವರು ಈ ಕುರಿತು ಸರ್ಕಾರಕ್ಕೆಮನವರಿಕೆ ಮಾಡಿಕೊಡಬೇಕು’ ಎಂದು ಹೇಳಿದರು.

‘ಅಣ್ಣಾವ್ರು ರಾಜ್ಯವನ್ನು ಒಗ್ಗೂಡಿಸುವ ಅಸ್ಮಿತೆಯ ಭಾಷೆಯನ್ನುನೀಡಿದರು. ಅದರ ಮೂಲ ಧ್ವನಿಯೇ ಗೋಕಾಕ್‌ ಚಳವಳಿಯಲ್ಲಿ ಸಮೂಹ ಧ್ವನಿಯಾಯಿತು. ಆದರೆ ಅವರ ಈ ಮೌಖಿಕ ಕೊಡುಗೆ ಇತಿಹಾಸದಲ್ಲಿ ದಾಖಲಾಗಿಲ್ಲ’ ಎಂದು ವಿಷಾದಿಸಿದರು.

‘ಡಾ.ರಾಜಕುಮಾರ್‌ ಚಿತ್ರಗಳಲ್ಲಿ ನಾಡು, ನುಡಿ ಹಾಗೂ ಭಾಷೆ ಪ್ರೇಮದ ಅಂಶಗಳು ಇರುತ್ತಿದ್ದವು, ಗ್ರಾಮಮುಖಿ ಚಿಂತನೆಗಳೂ ಇದ್ದವು’ ಎಂದು ಹೇಳಿದರು.

ಹಿರಿಯ ಕವಿ ನಿಸಾರ್‌ ಅಹಮದ್‌ ಮಾತನಾಡಿ,‘ನೆಲ, ಜಲ ಮತ್ತು ಗಾಳಿಯಲ್ಲಿ ಬೆರೆತು ಹೋದದೊಡ್ಡ ವ್ಯಕ್ತಿ ಡಾ. ರಾಜಕುಮಾರ್. ಸಿನಿಮಾದ ಮೂಲಕ ಕನ್ನಡಕ್ಕೆ ವಿಶ್ವಮಾನ್ಯತೆಯನ್ನು ತಂದುಕೊಟ್ಟರು.ಕುವೆಂಪು, ಕಾರಂತರು ಸಾಹಿತ್ಯದಲ್ಲಿ ಸಾಧಿಸಿದ್ದನ್ನು ಸಿನಿಮಾದ ಮೂಲಕ ಅವರು ಸಾಧಿಸಿದರು’ ಎಂದು ತಿಳಿಸಿದರು.

‘ಬಡತನದ ಕಾರಣಕ್ಕೆ ಅಣ್ಣಾವ್ರು ಚಿತ್ರರಂಗಕ್ಕೆ ಬಂದರು. ಕುಟುಂಬ ನಿರ್ವಹಣೆ ಸಾಧ್ಯವಾಗದಿದ್ದಾಗ ಆತ್ಮಹತ್ಯೆಗೆ ಮುಂದಾಗಿದ್ದರು. ಆದರೆ ಸ್ವಾಭಿಮಾನವನ್ನು ಎಂದೂಬಿಡಲಿಲ್ಲ. ಬೇಡರ ಕಣ್ಣಪ್ಪ ಚಿತ್ರದಲ್ಲಿ ನಟಿಸಲು ಅವರಿಗೆ ಅನಿರೀಕ್ಷಿತವಾಗಿ ಪತ್ರವೊಂದು ಬಂತು’ ಎಂದು ಅವರು ನೆನಪಿಸಿಕೊಂಡರು.

ನಟ ಶಿವರಾಜಕುಮಾರ್‌, ‘ಅಪ್ಪಾಜಿಯಷ್ಟು ಒಳ್ಳೆ ಗುಣ ನನಗಿಲ್ಲ. ಅವರಿಗೆ ಅವರೊಬ್ಬರೇ ಸಾಟಿ. ನನ್ನಲ್ಲಿ ಒಳ್ಳೆ ಮತ್ತು ಕೆಟ್ಟ ಎರಡೂ ಗುಣಗಳು ಇವೆ. ಈ ಕಾಲಘಟ್ಟಕ್ಕೆ ಕೆಟ್ಟ ಗುಣ ಇರಬೇಕು’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT