ತಾಯ್ನುಡಿ ಹಬ್ಬಕ್ಕೆ ಕೆಂಪು,ಹಳದಿ ರಂಗು

7

ತಾಯ್ನುಡಿ ಹಬ್ಬಕ್ಕೆ ಕೆಂಪು,ಹಳದಿ ರಂಗು

Published:
Updated:
Deccan Herald

ಬೆಂಗಳೂರು: ನಗರದಲ್ಲಿ ಗುರುವಾರ ಕನ್ನಡ ಹಬ್ಬದ ಸಂಭ್ರಮ ಜೋರಾಗಿತ್ತು. ಎಲ್ಲೆಡೆ ಕೆಂಪು, ಹಳದಿ ಬಣ್ಣದ ಬಾವುಟಗಳು ರಾರಾಜಿಸಿದವು.

ಆಟೊ, ಬಸ್‌, ಬೈಕ್‌ಗಳಲ್ಲಿ ಕೆಂಪು ಬಣ್ಣದ ಬಲೂನ್‌ ಹಾಗೂ ಬಾವುಟಗಳು ಹಾರಾಡಿದವು. ನಗರದ ಬಹುತೇಕ ವೃತ್ತಗಳಲ್ಲಿ ಸಿಹಿ ಹಂಚಿ, ಕನ್ನಡದ ಹಾಡುಗಳನ್ನು ಹಾಕುವ ಮೂಲಕ ಹಬ್ಬದಂತೆ ರಾಜ್ಯೋತ್ಸವನ್ನು ಆಚರಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರಿನ ಆಟೊ ಚಾಲಕರ ಸಂಘದವರು ಧ್ವಜಾರೋಹಣ ನೆರವೇರಿಸಿದರು. ನಂತರ, ಅನ್ನಸಂತರ್ಪಣೆ  ಏರ್ಪಡಿಸಲಾಗಿತ್ತು. ಶಿವನಗರದ ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ರಸಮಂಜರಿ ಆಯೋಜಿಸಲಾಯಿತು.

ಕರ್ನಾಟಕ ಹಾಲು ಮಹಾಮಂಡಳಿಯ ಕೇಂದ್ರ ಕಚೇರಿ ಆವರಣದಲ್ಲಿ ರಾಜ್ಯೋತ್ಸವ ಆಚರಿಸಿ, ನಂದಿನಿಯ ಹೊಸ ಉತ್ಪನ್ನಗಳಾದ ನಂದಿನಿ ಬೆಣ್ಣೆ ಮುರುಕು, ಖಾರ ಬೂಂದಿ, ಬಾಂಬೆ ಮಿಕ್ಸರ್‌, ಮಸಾಲ ಕೋಡುಬಳೆಯನ್ನು ಬಿಡುಗಡೆಗೊಳಿಸಲಾಯಿತು.

ಜಲಮಂಡಳಿಯಲ್ಲಿ ನಾಡಗೀತೆ ಹಾಡಿ ರಾಜ್ಯೋತ್ಸವ ಆಚರಿಸಲಾಯಿತು. ಕನ್ನಡದ ಗೆಳೆಯರ ಬಳಗ ಕೂಡ ನಗರದ ವಿವಿಧ ಭಾಗಗಳಲ್ಲಿ ಕನ್ನಡದ ಹಬ್ಬ ಆಚರಿಸಿತು.

ಬೈಕ್‌ ರ‍್ಯಾಲಿ:ಜಯಕರ್ನಾಟಕ ಸಂಘಟನೆ ವತಿಯಿಂದ ರಾಜ್ಯೋತ್ಸವದ ಅಂಗವಾಗಿ ರಾಮಮೂರ್ತಿ ನಗರ ಕಲ್ಕೆರೆಯಲ್ಲಿ ಬೈಕ್ ರ‍್ಯಾಲಿಯನ್ನು ಆಯೋಜಿಸಲಾಗಿತ್ತು.

ನಗರ ಕಾರ್ಯಾಧ್ಯಕ್ಷ ಶ್ರೀನಿವಾಸ್ ಅವರು ರ‍್ಯಾಲಿಗೆ ಚಾಲನೆ ನೀಡಿದರು.

ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದ ಅಧ್ಯಕ್ಷ ಕಲ್ಕೆರೆ ಜಿ.ಮಾದೇಶಗೌಡ, ‘ಕೆ.ಆರ್.ಪುರ ಭಾಗದಲ್ಲಿ ಪರಭಾಷಿಕರ ಸಂಖ್ಯೆ ಹೆಚ್ಚಿದೆ. ಅವರಿಗೆ ಕನ್ನಡ ಕಲಿಸುವ ಯೋಜನೆ ಹಾಕಿಕೊಂಡು ಭಾಷೆಯನ್ನು ಬೆಳೆಸಬೇಕು’ ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !