ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‍್ಯಾಲಿ ಫಾರ್‌ ರಿವರ್‌ಗೆ ‘ವಾಟರ್‌ ಪ್ರಶಸ್ತಿ’

Last Updated 25 ಫೆಬ್ರುವರಿ 2019, 19:27 IST
ಅಕ್ಷರ ಗಾತ್ರ

ಬೆಂಗಳೂರು:ನದಿಗಳ ಸಂರಕ್ಷಣೆಗೆ ಸದ್ಗುರು ಜಗ್ಗಿ ವಾಸುದೇವ್‌ ನೇತೃತ್ವದ ಈಶಾ ಫೌಂಡೇಷನ್‌ ಆರಂಭಿಸಿದ್ದ ರ‍್ಯಾಲಿ ಫಾರ್‌ ರಿವರ್‌‌ (ನದಿಗಾಗಿ ಜಾಥಾ) ಜಾಗೃತಿ ಅಭಿಯಾನಕ್ಕೆ ಕೇಂದ್ರ ಜಲಸಂಪನ್ಮೂಲ ಇಲಾಖೆಯ 2018ರ ಸಾಲಿನರಾಷ್ಟ್ರೀಯ ‘ವಾಟರ್‌’ ಪ್ರಶಸ್ತಿ ದೊರೆತಿದೆ.

ಸಮೂಹ ಜಾಗೃತಿ ಪ್ರಯತ್ನಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.

ನವದೆಹಲಿಯಕಾನ್‌ಸ್ಟಿಟ್ಯೂಷನ್‌ ಕ್ಲಬ್‌ನಲ್ಲಿ ಸೋಮವಾರಏರ್ಪಡಿಸಿದ್ದ ಕಾರ್ಯಕ್ರಮದಲ್ಲಿಕೇಂದ್ರ ಜಲಸಂಪನ್ಮೂಲ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಯು.ಪಿ.ಸಿಂಗ್ ಉಪಸ್ಥಿತರಿದ್ದರು.

ನದಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದುಮತ್ತು ನದಿಗಳಪುನಶ್ಚೇತನಕ್ಕೆ ಸಮಗ್ರ ಯೋಜನೆ ಒದಗಿಸುವ ಉದ್ದೇಶದೊಂದಿಗೆ 2017ರ ಸೆಪ್ಟೆಂಬರ್‌ನಲ್ಲಿ ತಮಿಳುನಾಡಿನ ಕೊಯಮತ್ತೂರಿನಿಂದ ರ‍್ಯಾಲಿಯನ್ನು ಪ್ರಾರಂಭಿಸಲಾಗಿತ್ತು. ಸುಮಾರು 162 ಮಿಲಿಯನ್‌ ಜನ ಭಾಗವಹಿಸಿದ್ದರು. ಅಕ್ಟೋಬರ್‌ 2ರಂದು ದೆಹಲಿಯಲ್ಲಿ ರ‍್ಯಾಲಿಕೊನೆಗೊಂಡಿತ್ತು. ಈ ಮೂಲಕ ಅದುಅತಿದೊಡ್ಡ ಪರಿಸರ ಚಳುವಳಿ ಎನ್ನುವ ಕೀರ್ತಿಗೆ ಪಾತ್ರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT