ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀನ ಪ್ರಾತ್ಯಕ್ಷಿಕೆಗಳಿಗೆ ಮಾರುಹೋದರು

Last Updated 24 ಮೇ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶುಕ್ರವಾರ ನಡೆದ ತಂತ್ರಜ್ಞಾನ ಮಾದರಿ ಪ್ರಾತ್ಯಕ್ಷಿಕೆಗಳ ಪ್ರದರ್ಶನದಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ನವೀನ ತಂತ್ರಜ್ಞಾನಗಳು ನೋಡುಗರ ಮನಗೆದ್ದವು.

ವೊಲ್ವೊ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಉಪಾಧ್ಯಕ್ಷ ಬಿ.ಇಂದುಶೇಖರ್ ಪ್ರದರ್ಶನವನ್ನು ಉದ್ಘಾಟಿಸಿದರು. ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

ಕಂಪ್ಯೂಟರ್‌ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಮೆಕ್ಯಾನಿಕಲ್‌ ಮತ್ತು ಸಿವಿಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ತಯಾರಿಸಿದ್ದ ಎಲೆಕ್ಟ್ರಾನಿಕ್‌ ಸಾಧನ, ತಂತ್ರಜ್ಞಾನಗಳ ಮಾದರಿಗಳು ನೋಡುಗರ ಗಮನ ಸೆಳೆದವು. 151 ಪ್ರದರ್ಶನ ಮಳಿಗೆಗಳಲ್ಲಿ 13 ಎಂಜಿನಿಯರಿಂಗ್ ವಿಭಾಗಗಳ ವಿದ್ಯಾರ್ಥಿಗಳ 443 ಮಾದರಿಗಳನ್ನು ಇಡಲಾಗಿತ್ತು.

‘ಬ್ಯಾಟರಿ ಚಾಲಿತ ಫಿಟ್ ಸ್ಟೆಪ್‌ ಇ–ಬೈಕ್‌ ಹೆಚ್ಚು ಗಮನ ಸೆಳೆದಿದ್ದು, ದೈಹಿಕ ಕಸರತ್ತು ನಡೆಸಲು ಅನುಕೂಲವಾಗುವಂತೆ ಈ ವಾಹನವನ್ನು ಅಭಿವೃದ್ಧಿಪಡಿಸಲಾಗಿದೆ. ಜತೆಗೆ ಮಾಲಿನ್ಯ ನಿಯಂತ್ರಣಕ್ಕೆ ಕಡಿವಾಣಕ್ಕೂ ಬೀಳಲಿದೆ. ಇದಕ್ಕೆ ಟ್ರೆಡ್ ಮಿಲ್‌ ಅನ್ನು
ಅಳವಡಿಸಲಾಗಿದ್ದು, ಅದರ ಮೇಲೆ ಓಡುತ್ತಲೇ ವಾಹನ ಚಲಾಯಿಸಬಹುದು’ ಎಂದು ವಿದ್ಯಾರ್ಥಿಗಳು ವಿವರಿಸಿದರು.

‘ಅಂಧರಿಗೆ ನೆರವಾಗುವ ಜಿಪಿಎಸ್‌ ಆಧಾರಿತ ಸ್ಪರ್ಶ ಯಂತ್ರ ಆಕರ್ಷಿಸಿತು. ಇದು ಕೈಗವಸು. ಇದಕ್ಕೆ ಸೆನ್ಸರ್‌ ಅಳವಡಿಸಲಾಗಿದ್ದು, ಎದುರಿಗೆ ಬರುವ ವ್ಯಕ್ತಿಗಳನ್ನು ಗುರುತಿಸಿ ಸಂದೇಶ ನೀಡುತ್ತದೆ. ಸಂಚರಿಸುವಾಗ ಎಡ–ಬಲ ಎಂಬುದನ್ನು ಸೂಚಿಸುತ್ತದೆ. ಗೂಗಲ್‌ ಮ್ಯಾಪ್‌ ಕೂಡ ಇದರಲ್ಲಿದೆ. ಯಾರ ಸಹಾಯವಿ‌ಲ್ಲದೆ ಅಂಧರು ನಡೆಯಲು ಅನುಕೂಲವಾಗಲಿದೆ’ ಎಂದು ವಿದ್ಯಾರ್ಥಿಗಳು ವಿವರಿಸಿದರು.

ಉಳುವ ನಾಟಿಯಂತ್ರ, ಪೋರ್ಟೆಬಲ್‌ ಎಲೆಕ್ಟ್ರಿಕ್‌ ಸೈಕಲ್‌, ಗ್ರಾಮೀಣ ತಂತ್ರಜ್ಞಾನ,ಪರಿಸರಸ್ನೇಹಿ ಅಪಾರ್ಟ್‌ಮೆಂಟ್‌ ಮಾದರಿ,ರಕ್ಷಣಾ ಇಲಾಖೆಗೆ ಸಹಾಯಕವಾಗುವ ಡ್ರೋಣ್‌ ಮಾದರಿ,ಪಾರ್ಶ್ವವಾಯು ಪೀಡಿತರಿಗೆ ಅನುಕೂಲವಾಗುವ ಕೃತಕ ಕಾಲುಗಳ ತಂತ್ರಜ್ಞಾನ ಸೇರಿದಂತೆ ಅನೇಕ ಮಾದರಿಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT