ಶುಕ್ರವಾರ, ನವೆಂಬರ್ 15, 2019
26 °C

‘ಪ್ಲಾಸ್ಟಿಕ್‌ನಷ್ಟೇ ಜವಳಿ ತ್ಯಾಜ್ಯವೂ ಅಪಾಯಕಾರಿ’

Published:
Updated:

ಬೆಂಗಳೂರು: ನಗರದಲ್ಲಿ ಕಸದ ಸಮಸ್ಯೆ ದೊಡ್ಡ ತಲೆನೋವಾಗಿದ್ದು, ಪ್ಲಾಸ್ಟಿಕ್‌ ಬಳಕೆಯು ಈ ಸಮಸ್ಯೆಗೆ ದೊಡ್ಡ ಕೊಡುಗೆ ನೀಡುತ್ತಿದೆ. ಜವಳಿ ತ್ಯಾಜ್ಯ ಕೂಡ ಪ್ಲಾಸ್ಟಿಕ್‌ನಷ್ಟೇ ಅಪಾಯಕಾರಿಯಾಗಿದ್ದು, ಮುಂಬರುವ ದಿನಗಳಲ್ಲಿ ಪರಿಸರಕ್ಕೆ ಇದರಿಂದಲೂ ದೊಡ್ಡ ಹಾನಿಯಾಗಲಿದೆ. ಈ ನಿಟ್ಟಿನಲ್ಲಿ ಈಗಲೇ ಬಿಬಿಎಂಪಿ ಎಚ್ಚೆತ್ತುಕೊಳ್ಳಬೇಕು. 

ರಾಮಯ್ಯ ಆನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ (ಆರ್‌ಯುಎಎಸ್‌) ‘ಜವಳಿ ತ್ಯಾಜ್ಯ ನಿರ್ವಹಣೆ ಮತ್ತು ಪುನರ್‌ಬಳಕೆ’ ಕುರಿತು ಗುರುವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಈ ಕಳಕಳಿ ವ್ಯಕ್ತವಾಯಿತು. ಜವಳಿ ತ್ಯಾಜ್ಯದಿಂದ ಪರಿಸರ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ತಜ್ಞರು ಉಪನ್ಯಾಸ ನೀಡಿದರು. 

‘ಬೆಂಗಳೂರಿನಲ್ಲಿ ಹೆಚ್ಚು ಗಾರ್ಮೆಂಟ್‌ ಕೈಗಾರಿಕೆಗಳಿವೆ. ಇವುಗಳು ಹೊರ ಬಿಡುವ ರಾಸಾಯನಿಕಗಳು, ಹೆಚ್ಚುತ್ತಿರುವ ಬಟ್ಟೆ ಉತ್ಪಾದನೆಯಿಂದಲೂ ದುಷ್ಪರಿಣಾಮ ಉಂಟಾಗಲಿದೆ. ನಿಧಾನಗತಿಯ ವಿಷದಂತೆ ಇದು ಪರಿಸರಕ್ಕೆ ಹಾನಿ ಮಾಡಲಿದೆ’ ಎಂದು ವಿಷಯ ತಜ್ಞರು ಹೇಳಿದರು. 

ಪ್ರತಿಕ್ರಿಯಿಸಿ (+)