ಸೀಟು ಕೊಡಿಸುವುದಾಗಿ ₹5.19 ಲಕ್ಷ ವಂಚನೆ

7

ಸೀಟು ಕೊಡಿಸುವುದಾಗಿ ₹5.19 ಲಕ್ಷ ವಂಚನೆ

Published:
Updated:

ಬೆಂಗಳೂರು: ನಗರದ ಎಂ.ಎಸ್.ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಹೇಳಿ ಬಿ. ಕಿಶೋರ್‌ ಎಂಬುವರಿಂದ ₹5.19 ಲಕ್ಷ ಪಡೆದು ವಂಚಿಸಲಾಗಿದೆ.

ಆ ಸಂಬಂಧ ಮಹದೇವಪುರ ಠಾಣೆಗೆ ದೂರು ನೀಡಿರುವ ಕಿಶೋರ್, ‘ತೇಜಸ್ ಹಾಗೂ ಮಂಜುನಾಥ್ ಎಂಬುವರು ಎಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ಹೇಳಿ ವಂಚಿಸಿದ್ದಾರೆ’ ಎಂದು ದೂರಿದ್ದಾರೆ.

‘ಕಾಲೇಜುಗಳಿಗಾಗಿ ಹುಡುಕಾಟ ನಡೆಸುತ್ತಿದ್ದೆ. ಪರಿಚಯಸ್ಥರೇ ಆದ ತೇಜಸ್‌, ಮಂಜುನಾಥ್, ರಾಮಯ್ಯ ಕಾಲೇಜಿನಲ್ಲಿ ಸೀಟು ಕೊಡಿಸಲು ₹5.70 ಲಕ್ಷ ಕೇಳಿದ್ದರು. ಇಬ್ಬರ ಖಾತೆಗೂ ಹಣ ಹಾಕಿದ್ದೆ’ ಎಂದು ದೂರಿನಲ್ಲಿ ಕಿಶೋರ್ ಹೇಳಿದ್ದಾರೆ. ‘ಹಣ ಪಡೆದ ನಂತರ ಆರೋಪಿಗಳು, ನನಗೆ ಸೀಟು ಕೊಡಿಸಿಲ್ಲ. ಹಣ ವಾಪಸ್‌ ಕೇಳಿದ್ದಕ್ಕೆ ₹51 ಸಾವಿರ ಮಾತ್ರ ನೀಡಿದ್ದಾರೆ. ಉಳಿದ ಹಣ ಕೊಡದೇ ವಂಚಿಸಿದ್ದಾರೆ. ಅವರಿಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಒತ್ತಾಯಿಸಿದ್ದಾರೆ. ದೂರು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !