ಹಳೇ ಹುಬ್ಬಳ್ಳಿ ‍ಪೊಲೀಸರಿಂದ ಆರೋಪಿ ಬಂಧನ

ಶನಿವಾರ, ಮೇ 25, 2019
33 °C
ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ

ಹಳೇ ಹುಬ್ಬಳ್ಳಿ ‍ಪೊಲೀಸರಿಂದ ಆರೋಪಿ ಬಂಧನ

Published:
Updated:

ಹುಬ್ಬಳ್ಳಿ: ಕೆಲಸ ಕೊಡಿಸುವುದಾಗಿ ಯುವತಿಯನ್ನು ನಂಬಿಸಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ಆನಂದನಗರದ ಶ್ರೀಧರ ಖಾಪ್ರೆ (27) ಎಂಬಾತನನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶ್ರೀಧರ್‌ ಅಂಗಡಿಗಳ ಶಟರ್ ತಯಾರಿಸಿ ಮಾರಾಟ ಮಾಡುವ ವ್ಯವಹಾರ ನಡೆಸುತ್ತಿದ್ದ.

‘ಆಕಸ್ಮಿಕವಾಗಿ ಪರಿಚಯವಾಗಿದ್ದ ಶ್ರೀಧರ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದ. ಅದೇ ನೆಪದಲ್ಲಿ ಹಲವಾರು ಬಾರಿ ಅತ್ಯಾಚಾರ ಮಾಡಿದ್ದ,. ಕೆಲಸವನ್ನು ಸಹ ಕೊಡಿಸದೆ ಸತಾಯಿಸಿದ. ಅದನ್ನು ಪ್ರಶ್ನಿಸಿದಕ್ಕೆ ಬೆದರಿಕೆ ಹಾಕಿದ್ದ. ಪೊಲೀಸರಿಗೆ ದೂರು ನೀಡಿದರೆ ಕೊಲ್ಲುವುದಾಗಿ ಹೆದರಿಸಿದ್ದ’  ಎಂದು ದೂರುದಾರ ಯುವತಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !