ಬಾಲಕಿ ಮೇಲೆ ಅತ್ಯಾಚಾರ ಆರೋಪಿಗೆ 20ವರ್ಷ ಜೈಲು

7

ಬಾಲಕಿ ಮೇಲೆ ಅತ್ಯಾಚಾರ ಆರೋಪಿಗೆ 20ವರ್ಷ ಜೈಲು

Published:
Updated:

ಬೆಂಗಳೂರು: ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಬಿಹಾರ ಮೂಲದ ಆರೋಪಿ ರಾಜೇಶ್‌ ಪ್ರಸಾದ್‌ಗೆ (20) ಎಂಬಾತನಿಗೆ 20 ವರ್ಷ ಜೈಲು ಮತ್ತು ₹4 ಸಾವಿರ ದಂಡ ವಿಧಿಸಿ ನಗರದ 57ನೇ ಸಿಸಿಎಚ್ ನ್ಯಾಯಾಲಯವು ಆದೇಶ ಹೊರಡಿಸಿದೆ.

2016ರಲ್ಲಿ ನಡೆದಿದ್ದ ಪ್ರಕರಣದ ವಿಚಾರಣೆಗೆ ಸೆಷನ್ಸ್‌ ನ್ಯಾಯಾಲಯದ (55ನೇ) ನ್ಯಾಯಾಧೀಶೆ ಶಾರದಾ ಅವರು ಈ ತೀರ್ಪು ನೀಡಿದ್ದಾರೆ. ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳಾದ ಹಿರೇಮನಿ ಮತ್ತು ರಂಗಯ್ಯ ಅವರು ವಾದ ಮಂಡಿಸಿದರು.

ಬಾಲಕಿಯ ಸಂಬಂಧಿಕರು ನೀಡಿದ್ದ ದೂರಿನಡಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಚಂದ್ರಾಲೇಔಟ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಧಿಸಿರುವ ದಂಡದ ₹4 ಸಾವಿರವನ್ನು ಸಂತ್ರಸ್ತೆಗೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ.

ಧನುಷ್‌ಗೆ 3 ವರ್ಷ ಜೈಲು: ಬಾಲಕನನ್ನು ಕೊಲೆಗೈದ ನಾಯಂಡಹಳ್ಳಿಯ ರಾಮಚಂದ್ರಪ್ಪ ವಠಾರದ ಆರೋಪಿ ಧನುಷ್‌ (21) ಎಂಬಾತನಿಗೆ ಮೂರುವರ್ಷ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ಇಲ್ಲಿನ 8ನೇ ಎಸಿಎಂಸಿ ನ್ಯಾಯಾಲಯ ತೀರ್ಪು ನೀಡಿದೆ.

ವೆಂಕಟಾಚಲಯ್ಯಗೆ 4 ವರ್ಷ ಜೈಲು: ಜಮೀನು ಮಾಡಿಸಿಕೊಡಿಸುವುದಾಗಿ ₹ 5 ಸಾವಿರ ಲಂಚ ಪಡೆಯುವಾಗ ರೆಡ್‌ ಹ್ಯಾಂಡ್‌ ಆಗಿ ಎಸಿಬಿ ಬಲೆಗೆ ಸಿಕ್ಕಿಬಿದಿದ್ದ ಆರೋಪಿ ಎಸ್‌ಡಿಎ ಅಧಿಕಾರಿ ವೆಂಕಟಾಚಲಯ್ಯ ಎಂಬಾತನಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ ₹ 15 ಸಾವಿರ
ದಂಡ ವಿಧಿಸಿ ಬೆಂಗಳೂರು ಗ್ರಾಮಾಂತರದ 9ನೇ ಹೆಚ್ಚುವರಿ ನ್ಯಾಯಾಲಯ ತೀರ್ಪು ನೀಡಿದೆ. 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !