ರಾಶಿ ಸಂಸ್ಥೆಯಿಂದ ಮತ್ತೊಂದು ರೆಸಾರ್ಟ್‌

7

ರಾಶಿ ಸಂಸ್ಥೆಯಿಂದ ಮತ್ತೊಂದು ರೆಸಾರ್ಟ್‌

Published:
Updated:

ಬೆಂಗಳೂರು: ರಾಶಿ ಇಕೋ ಟೂರಿಸಂ ಕಂಪನಿಯು ತನ್ನ ಹತ್ತನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪರಿಸರ ಸ್ನೇಹಿ ಐಷಾರಾಮಿ ರೆಸಾರ್ಟ್‌ ‘ಸಿರಿ ನೇಚರ್ ರೂಸ್ಟ್ಸ್‌’ ಆರಂಭಿಸಿದೆ.

ಚಿಕ್ಕಮಗಳೂರಿನ ಸಮೀಪದ ಮುಳ್ಳಯ್ಯನಗಿರಿ ಬಳಿ 21 ಎಕರೆ ವಿಸ್ತೀರ್ಣದಲ್ಲಿ ಈ ರೆಸಾರ್ಟ್‌ ನಿರ್ಮಿಸಲಾಗಿದೆ.

‘ಪ್ರಾಕೃತಿಕ ಸೊಬಗಿನ ನಡುವೆ ಐಷಾರಾಮಿ ಕಾಟೇಜ್‌ಗಳನ್ನು ನಿರ್ಮಿಸಲಾಗಿದ್ದು, ಸ್ಥಳೀಯ ಪರಿಸರಕ್ಕೆ ಯಾವ ರೀತಿಯಲ್ಲೂ ತೊಂದರೆ ಆಗದಂತೆ ಎಚ್ಚರ ವಹಿಸಲಾಗಿದೆ. ಡ್ರೋನ್‌ ಕ್ಯಾಮೆರಾ ಮೂಲಕ ವೀಕ್ಷಿಸಿದರೆ ಈ ಕಾಟೇಜ್‌ಗಳು ಪರಿಸರದಲ್ಲಿ ಬೆರೆತುಹೋದಂತೆ ಭಾಸವಾಗುತ್ತದೆ’ ಎಂದು ಸಂಸ್ಥೆಯ ವಕ್ತಾರರಾದ ಎಂ.ಜೆ.ಶ್ರೀಕಾಂತ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

2008ರಲ್ಲಿ ಇದೇ ಸಂಸ್ಥೆ ಗುಹಾಂತರ ರೆಸಾರ್ಟ್‌ ಆರಂಭಿಸಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !