ಬಾರ್‌ ತೆರೆಯದಂತೆ ಸಿ.ಎಂಗೆ ಮನವಿ

7

ಬಾರ್‌ ತೆರೆಯದಂತೆ ಸಿ.ಎಂಗೆ ಮನವಿ

Published:
Updated:

ಬೆಂಗಳೂರು: ಜೀವನ್‌ ಬಿಮಾನಗರದ ಎಚ್ಎಎಲ್‌ ಮೂರನೇ ಹಂತದ ಎನ್‌ಎಎಲ್‌ ವಸತಿಗೃಹದ ಸಮೀಪ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಅಲ್ಲಿನ ನಿವಾಸಿಗಳು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

‘ಇದು ಜನವಸತಿ ಪ್ರದೇಶವಾಗಿದ್ದು, ಶಾಲಾ ಕಾಲೇಜುಗಳಿವೆ. ಸಮೀಪದಲ್ಲೇ ಚರ್ಚ್ ಸಹ ಇದೆ. ಜತೆಗೆ ವಿಜ್ಞಾನಿಗಳು ಹಾಗೂ ಹಿರಿಯ ನಾಗರಿಕರು ಎನ್‌ಎಎಲ್‌ ವಸತಿಗೃಹದಲ್ಲಿ ನೆಲೆಸಿದ್ದು, ಮದ್ಯದಂಗಡಿ ತೆರೆದರೆ ಜನರ ಸರಾಗ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಮದ್ಯದಂಗಡಿಗೆ ಪರವಾನಗಿ ನೀಡಬಾರದು ಎಂದು ಅಬಕಾರಿ ಇಲಾಖೆಗೆ ನಿರ್ದೇಶನ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !