ಗ್ಯಾಂಗ್‌ ಕಟ್ಟಿ ಕಳವು ಮಾಡುತ್ತಿದ್ದವರ ಬಂಧನ

7

ಗ್ಯಾಂಗ್‌ ಕಟ್ಟಿ ಕಳವು ಮಾಡುತ್ತಿದ್ದವರ ಬಂಧನ

Published:
Updated:

ಬೆಂಗಳೂರು: ಗ್ಯಾಂಗ್‌ ಕಟ್ಟಿಕೊಂಡು ಸುಲಿಗೆ ಹಾಗೂ ಮನೆಗಳವು ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.

ಪರಪ್ಪನ ಅಗ್ರಹಾರ ಸಮೀಪದ ನಾಗನಾಥಪುರದ ಭುವನೇಶ್ವರಿ ಲೇಔಟ್ ನಿವಾಸಿ ಅಜಿತ್ ಅಲಿಯಾಸ್ ಕಿರುಬ ಹಾಗೂ ಗುಣ ಬಂಧಿತರು. ಕದ್ದ ವಸ್ತುಗಳನ್ನು ಆರೋಪಿಗಳಿಂದ ಖರೀದಿಸುತ್ತಿದ್ದ ಕೋಲಾರ ಜಿಲ್ಲೆಯ ಚೊಕ್ಕಪುರದ ಶಿವಶಂಕರ್‌ ಎಂಬಾತನನ್ನೂ ಪೊಲೀಸರು ಸೆರೆ ಹಿಡಿದಿದ್ದಾರೆ.

‘ಸ್ಥಳೀಯ ಹುಡುಗರ ಗ್ಯಾಂಗ್ ಕಟ್ಟಿಕೊಂಡಿದ್ದ ಅಜಿತ್ ಹಾಗೂ ಗುಣ, ಅವರ ಸಹಾಯದಿಂದ ಮನೆಗಳವು ಹಾಗೂ ದರೋಡೆ ಮಾಡುತ್ತಿದ್ದರು. ಅವರಿಬ್ಬರ ಬಂಧನದಿಂದ ಬಸವೇಶ್ವರನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಪ್ರಕರಣಗಳು ಪತ್ತೆಯಾಗಿವೆ. ನಗರದ ಹಲವು ಠಾಣೆಗಳ ವ್ಯಾಪ್ತಿಯಲ್ಲೂ ಕೃತ್ಯ ಎಸಗಿರುವ ಮಾಹಿತಿ ಇದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳು ಆಗಸ್ಟ್ 13ರಂದು ಕುರುಬರಹಳ್ಳಿಯ ಈಶ್ವರ ದೇವಸ್ಥಾನ ಬಳಿ ಮಾರಕಾಸ್ತ್ರಗಳನ್ನು ಹಿಡಿದು ಬಂದಿದ್ದರು. ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದರು. ಅದೇ ವೇಳೆ ದಾಳಿ ಮಾಡಿ ಅವರನ್ನು ಬಂಧಿಸಲಾಯಿತು. ಅವರಿಂದ ₹4.30 ಲಕ್ಷ ಮೌಲ್ಯದ ಚಿನ್ನದ ಆಭರಣ, 20 ಮೊಬೈಲ್‌ಗಳು ಹಾಗೂ 4 ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದರು.

‘ಕದ್ದ ವಸ್ತುಗಳನ್ನು ಆರೋಪಿಗಳು, ಶಿವಶಂಕರ್‌ಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಆತನನ್ನೂ ಪ್ರಕರಣದಲ್ಲಿ ಆರೋಪಿಯನ್ನಾಗಿ ಹೆಸರಿಸಲಾಗಿದೆ’ ಎಂದು ಪೊಲೀಸರು ವಿವರಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !