‘ನಿರುದ್ಯೋಗ ಹೆಚ್ಚಿಸಿದ್ದು ಮೋದಿ ಸಾಧನೆ’

ಬುಧವಾರ, ಏಪ್ರಿಲ್ 24, 2019
34 °C

‘ನಿರುದ್ಯೋಗ ಹೆಚ್ಚಿಸಿದ್ದು ಮೋದಿ ಸಾಧನೆ’

Published:
Updated:

ರಾಜರಾಜೇಶ್ವರಿ ನಗರ: ‘ಲಕ್ಷಾಂತರ ಯುವ ಜನರಿಗೆ ಉದ್ಯೋಗ ಕೊಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ, ಆ ಭರವಸೆ ಈಡೇರಿಸಲಿಲ್ಲ. ಬದಲಿಗೆ ನಿರುದ್ಯೋಗ ಹೆಚ್ಚಿಸಿದ್ದಾರೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕಿಡಿಕಾರಿದರು. 

ನಾಗರಭಾವಿ, ಸುಂಕದಕಟ್ಟೆ, ಕೊಟ್ಟಿಗೆಪಾಳ್ಯ, ಲಗ್ಗೇರೆ ವ್ಯಾಪ್ತಿಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಮತಯಾಚನೆ ಮಾಡಿ ಶಿವಕುಮಾರ್‌ ಅವರು ಮಾತನಾಡಿದರು.

‘ರೈತರು, ಕಾರ್ಮಿಕರು, ಬಡವರ ಪರವಾಗಿ ನಿಲ್ಲದೆ ಉದ್ಯಮಿಗಳು, ಸಿರಿವಂತರ ಪರವಾಗಿರುವ ಬಿಜೆಪಿಯನ್ನು ಜನರು ತಿರಸ್ಕರಿಸಲಿದ್ದಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಮಾತನಾಡಿ, ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಡುಗೆ ಅನಿಲ ₹ 1,000, ಪೆಟ್ರೊಲ್‌ ಲೀಟರ್‌ಗೆ ₹ 86, ದಿನ ಬಳಕೆ ವಸ್ತುಗಳು, ಆಹಾರ ಪದಾರ್ಥಗಳ ಬೆಲೆಗಳು ಗಗನ ಮುಖಿಯಾದವು. ಕಾಂಗ್ರೆಸ್ ಆಡಳಿತದಲ್ಲಿ ಮಾತ್ರ ಬಡವರು ನೆಮ್ಮದಿಯಿಂದ ಜೀವನ ಮಾಡುತ್ತಾರೆ’ ಎಂದರು. 

ಶಾಸಕ ಮುನಿರತ್ನ ಮಾತನಾಡಿ,‘ಸಾವಿರಾರು ಜನರಿಗೆ ಉಚಿತ ವಸತಿ, ನಿವೇಶನ, ಡಯಾಲಿಸಿಸ್ ಕೇಂದ್ರ ಮತ್ತು ಹೆರಿಗೆ ಆಸ್ಪತ್ರೆ ಸೇರಿದಂತೆ ಸಮುದಾಯ ಭವನ, 200ಕ್ಕೂ ಅಧಿಕ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ನೂರಾರು ಉದ್ಯಾನಗಳ ಅಭಿವೃದ್ಧಿ, 180 ವ್ಯಾಯಾಮ ಶಾಲೆಗಳು ಸೇರಿದಂತೆ ಹಲವು ಅಭಿವೃದ್ಧಿ ಕೆಲಸ ಮಾಡಲಾಗಿದೆ. ನಿಮ್ಮ ಸೇವೆ ಮಾಡಿರುವ ನಮಗೆ ಕೂಲಿ ನೀಡಿ’ ಎಂದು ಮನವಿ ಮಾಡಿದರು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !