ಗುರುವಾರ , ಆಗಸ್ಟ್ 22, 2019
22 °C

‘ಪೌರ ಕಾರ್ಮಿಕರೇ ಸಮಾಜ ಸೇವಕರು’

Published:
Updated:
Prajavani

ರಾಜರಾಜೇಶ್ವರಿನಗರ: ‘ತಮ್ಮ ಆರೋಗ್ಯ ಬಲಿಕೊಟ್ಟು, ನಾಗರಿಕರ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರೇ ನಿಜವಾದ ಸಮಾಜ ಸೇವಕರು’ ಎಂದು ಬಿಬಿಎಂಪಿ ಸದಸ್ಯೆ ಶಾರದಾ ಜಿ.ಮುನಿರಾಜು ಹೇಳಿದರು.

ಉಲ್ಲಾಳು ವಾರ್ಡನ ಜ್ಞಾನಭಾರತಿ ಬಡಾವಣೆಯಲ್ಲಿ ಅಪಲೋ ಆಸ್ಪತ್ರೆ ಸಹಯೋಗದಲ್ಲಿ ಬಿಬಿಎಂಪಿ ಆಯೋಜಿಸಿದ್ದ   ಆರೋಗ್ಯ ತಪಾ ಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ‘ಅಂತಹ ಪೌರ ಕಾರ್ಮಿಕರ ಸೇವೆ ಮಾಡುವುದೇ ನಿಜ ವಾದ ನಾರಾಯಣನ ಸೇವೆ ಎನ್ನುವ ಮನೋಭಾವದಿಂದ ಆರೋಗ್ಯ ಶಿಬಿರ ಆಯೋಜಿಸಲಾಗಿದೆ‘ ಎಂದು ಅವರು ಹೇಳಿದರು.

ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಧುಕುಮಾರ್ ಮಾತನಾಡಿ, ಮೂರು ತಿಂಗಳಿಗೊಮ್ಮೆ ಪೌರಕಾರ್ಮಿಕರ ಕುಟುಂಬ ವರ್ಗದವರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ ಎಂದರು.

Post Comments (+)