ಗ್ರಾಮೀಣ ಭಾರತದ ಸಮಸ್ಯೆ ಆದ್ಯತೆಯಾಗಲಿ: ಜಗದೀಶ ಬೆಳಗಲಿ

ಶನಿವಾರ, ಏಪ್ರಿಲ್ 20, 2019
31 °C
ಲೀಡ್ ಹುಬ್ಬಳ್ಳಿ ಸಮಾರೋಪ

ಗ್ರಾಮೀಣ ಭಾರತದ ಸಮಸ್ಯೆ ಆದ್ಯತೆಯಾಗಲಿ: ಜಗದೀಶ ಬೆಳಗಲಿ

Published:
Updated:
Prajavani

ಹುಬ್ಬಳ್ಳಿ: ‘ಸಮಾಜದಲ್ಲಿ ಬದಲಾವಣೆ ತರಬೇಕು ಎಂದಾದರೆ ಗ್ರಾಮೀಣ ಭಾರತದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳಾಗಲಿ’ ಎಂದು ಹೆಸ್ಕಾಂ ತಾಂತ್ರಿಕ ವಿಭಾಗದ ಪ್ರಧಾನ ವ್ಯವಸ್ಥಾಪಕ ಜಗದೀಶ ಎಲ್ ಬೆಳಗಲಿ ಹೇಳಿದರು.

ದೇಶಪಾಂಡೆ ಫೌಂಡೇಷನ್ ಬುಧವಾರ ಆಯೋಜಿಸಿದ್ದ ‘ಲೀಡ್‌ ಹುಬ್ಬಳ್ಳಿ’ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಎಲ್‌ಇಡಿ ಬಲ್ಬ್ ಬಳಕೆಯಿಂದಾಗಿ ಗಣನೀಯ ಪ್ರಮಾಣದಲ್ಲಿ ವಿದ್ಯುತ್ ಉಳಿತಾಯವಾಗಲಿದೆ. ವಾಸ್ತವವಾಗಿ ಈ ಋತುವಿನಲ್ಲಿ ವಿದ್ಯುತ್ ಕೊರತೆ ಇರುತ್ತಿತ್ತು, ಆದರೆ ಈ ಬಾರಿ ಆ ಸಮಸ್ಯೆ ಇಲ್ಲ. ಇದಕ್ಕೆ ಪ್ರಮುಖ ಕಾರಣ ಎಲ್‌ಇಡಿ ಬಲ್ಬ್‌ಗಳು. ಆದರೆ ಗ್ರಾಮೀಣ ಭಾಗದಲ್ಲಿ ಇದರ ಬಗ್ಗೆ ಇನ್ನೂ ಜಾಗೃತಿ ಇಲ್ಲ. ಕಡಿಮೆ ಬೆಲೆಗೆ ಸಿಗುವ ಫ್ಲೋರೋಸೆಂಟ್ ಬಲ್ಬ್‌ಗಳನ್ನು ಬಳಸತ್ತಿದ್ದಾರೆ. ಈ ಬಗ್ಗೆಯೂ ಲೀಡ್‌ ತಂಡದವರು ಜಾಗೃತಿ ಮೂಡಿಸಬೇಕು’ ಎಂದು ಅವರು ಹೇಳಿದರು.

‘ಹೆಸ್ಕಾಂ ವ್ಯಾಪ್ತಿಯಲ್ಲಿ ಶೇ60ರಷ್ಟು ವಿದ್ಯುತ್ ಅನ್ನು ಕೇವಲ ಪಂಪ್‌ಸೆಟ್‌ಗಳಿಗಾಗಿ ಬಳಕೆ ಮಾಡಲಾಗುತ್ತಿದೆ. ಇಲ್ಲಿ ವಿದ್ಯುತ್ ಪ್ರಮಾಣವನ್ನು ಕಡಿಮೆ ಮಾಡಲು ಇರುವ ಮಾರ್ಗೋಪಾಯಗಳನ್ನು ಪರಿಚಯಿಸಿದರೆ ಅನುಕೂಲವಾಗಲಿದೆ’ ಎಂದರು.

‘ಸಂಚಾರ ನಿಯಮ ಉಲ್ಲಂಘಿಸುವ ಕಾನೂನು ಮೀರುವ ಯುವಕರನ್ನು ನೋಡುತ್ತಿದ್ದೆ. ಆದರೆ ಲೀಡ್ ತಂಡದ ಯುವಕರನ್ನು ನೋಡಿದಾಗ ಸಮಾಜಮುಖಿ ಕೆಲಸಗಳಲ್ಲಿ ನಮ್ಮ ಯುವಕರು ತೊಡಗಿಸಿಕೊಂಡಿದ್ದಾರಲ್ಲ ಅನಿಸಿತು. ಯುವ ಶಕ್ತಿ ಭಾರತದ ಅದ್ಭುತ ಶಕ್ತಿಯಾಗಲು ನೀವೆಲ್ಲ ಕಾರಣೀಭೂತರಾಗಬೇಕು’ ಎಂದು ನಿವೃತ್ತ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಸಂಗಪ್ಪ ಎಚ್‌ ಮಿಟ್ಟಲ್ಕೋಡ್‌ ಹೇಳಿದರು.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಡೀನ್ ಸಂಜಯ್ ಕೊಟಬಾಗಿ, ಬಿಸಿಎ ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ಮಾನದ್‌, ಮೃತ್ಯುಂಜಯ ಕಲಾ– ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ವಿ.ವಿ. ಪಾಟೀಲ, ದೇಶಪಾಂಡೆ ಫೌಂಡೇಶನ್‌ನ ಸಿಇಒ ವಿವೇಕ್ ಪವಾರ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !