ಮಂಗಳವಾರ, ನವೆಂಬರ್ 19, 2019
29 °C

ಸಂಸ್ಕೃತೋತ್ಸವ: ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ

Published:
Updated:
Prajavani

ಬೆಂಗಳೂರು: ‘ದೇಶದ ಪ್ರಾಚೀನ ವಿಶ್ವವಿದ್ಯಾಲಯಗಳಾದ ನಳಂದಾ, ತಕ್ಷಶಿಲಾಗಳ ಇತಿಹಾಸವನ್ನು ತಿಳಿದುಕೊಂಡಾಗ ನಮ್ಮ ಸಂಸ್ಕೃತಿ ಎಷ್ಟೊಂದು ಸಮೃದ್ಧವಾಗಿತ್ತು ಎಂಬುದರ ಅರಿವಾಗುತ್ತದೆ’ ಎಂದು ಅದಮ್ಯ ಚೇತನ ಸಂಸ್ಥೆಯ ಸ್ಥಾಪಕಿ ತೇಜಸ್ವಿನಿ ಅನಂತಕುಮಾರ್ ಅಭಿಪ್ರಾಯ‍ಪಟ್ಟರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಸೋಮವಾರ ಆಯೋಜಿಸಿದ್ದ ‘ಸಂಸ್ಕೃತೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನಮ್ಮ ಸಂಸ್ಕೃತಿಯ ಮಹತ್ವ ತಿಳಿಸುವ ಕಾರ್ಯಕ್ರಮಗಳು ಕಾಶ್ಮೀರದಲ್ಲೂ ನಡೆಯುವಂತಾಗಲಿ’ ಎಂಬ ಆಶಯ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿ.ಗಿರೀಶ್ ಚಂದ್ರ, ಕುಲಸಚಿವ ಪ್ರೊ. ವೀರನಾರಾಯಣ ಎನ್.ಕೆ.ಪಾಂಡುರಂಗಿ, ಪ್ರಜ್ಞಾವರ್ಧಿನೀ ಟ್ರಸ್ಟ್ ಸಂಸ್ಥೆ ಮುಖ್ಯಸ್ಥ ಸತೀಶ ಹೆಗಡೆ, ಸುರಸರಸ್ವತೀ ಸಭಾ ನಿರ್ದೇಶಕ ಸುರೇಶ್, ‌ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘದ ಅಧ್ಯಕ್ಷ ನಾರಾಯಣ ಭಟ್ಟ, ಉದಯನ ಹೆಗಡೆ, ಭಾಸ್ಕರ ಭಟ್ಟ ಜೋಶಿ, ರಾಮಕೃಷ್ಣ ಭಟ್ಟ ಭಾಗವಹಿಸಿದ್ದರು.

ವಿಶ್ವವಿದ್ಯಾಲಯವು ಸಂಸ್ಕೃತೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಶ್ಲೋಕಗಳ ಕಂಠಪಾಠ, ರಸಪ್ರಶ್ನೆ, ಚಿತ್ರಕಲೆ, ಪ್ರಬಂಧ ಲೇಖನ ಸ್ಪರ್ಧೆಗಳನ್ನು ಆಯೋಜಿಸಿತ್ತು.

ಪ್ರತಿಕ್ರಿಯಿಸಿ (+)