ಎಸ್‌.ಪಿ ಮನೆ ಆವರಣದಲ್ಲೇ ಗಂಧದ ಮರ ಕಳವು

ಸೋಮವಾರ, ಮಾರ್ಚ್ 25, 2019
28 °C

ಎಸ್‌.ಪಿ ಮನೆ ಆವರಣದಲ್ಲೇ ಗಂಧದ ಮರ ಕಳವು

Published:
Updated:

ಮೈಸೂರು: ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ ಸಿಂಗ್ ನಿವಾಸದ ಆವರಣದಲ್ಲಿ ಗುರುವಾರ ರಾತ್ರಿ ಗಂಧದ ಮರ ಕಳವಾಗಿದೆ.

ಭದ್ರತಾ ಸಿಬ್ಬಂದಿ ಇದ್ದರೂ ಮರ ಕತ್ತರಿಸಿ ತೆಗೆದುಕೊಂಡು ಹೋಗಲಾಗಿದೆ. ನಗರದಲ್ಲಿ ಗಂಧದ ಮರ ಕಳವು ಪ್ರಕರಣಗಳು ಹೆಚ್ಚುತ್ತಿದ್ದು, ಭದ್ರತಾ ಸಿಬ್ಬಂದಿ ಬಾಲಕೃಷ್ಣ ನಜರ್‌ಬಾದ್‌ ಠಾಣೆಗೆ ದೂರು ನೀಡಿದ್ದಾರೆ.

ಕಳೆದ ವರ್ಷ ಡಿಸೆಂಬರ್ 8ರಂದು ಮೈಸೂರು ವಿಶ್ವವಿದ್ಯಾಲಯ ಆವರಣದಲ್ಲಿ ಗಂಧದ ಮರ ಕಳವು ಮಾಡಲು ಯತ್ನಿಸುತ್ತಿದ್ದ ಕುಮಾರ ಎಂಬಾತನನ್ನು ವಿ.ವಿ ಭದ್ರತಾ ಸಿಬ್ಬಂದಿಯೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಅಕ್ಟೋಬರ್‌ನಲ್ಲಿ ರೇಸ್‌ಕೋರ್ಸ್ ಹಿಂಭಾಗ, ಜುಲೈನಲ್ಲಿ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಗಂಧದ ಮರಗಳ ಕಳವು ನಡೆದಿತ್ತು.

2017ರ ಫೆ. 11ರಂದು ಲಿಂಗಾಂಬುಧಿ ಕೆರೆ ಆವರಣದಲ್ಲಿ ಬೆಳೆದಿದ್ದ ಗಂಧದ ಮರದ ಕಳವಿಗೆ ಯತ್ನಿಸಿದ ವ್ಯಕ್ತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿ ಕೊಂದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !