ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

7

ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

Published:
Updated:

ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2018ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ಪ್ರಕಟಿಸಿದೆ. ಅಕಾಡೆಮಿ ಅಧ್ಯಕ್ಷ ಫಯಾಜ್‌ ಖಾನ್‌ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ.

ಕರ್ನಾಟಕ ಕಲಾಶ್ರೀ ಗೌರವ ಪ್ರಶಸ್ತಿಗೆ ಹಾವೇರಿ ಜಿಲ್ಲೆ ಹಿರೇಕೆರೂರಿನ ಫಕೀರಪ್ಪ ತಾಂದಳೆ (ಹಿಂದೂಸ್ತಾನಿ ಸಂಗೀತ), ಕೊಪ್ಪಳದ ಸದಾಶಿವ ಪಾಟೀಲ (ಸುಗಮ ಸಂಗೀತ) ಅವರನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕ ಕಲಾಶ್ರೀ ವಾರ್ಷಿಕ ಪ್ರಶಸ್ತಿಗೆ 14 ಕಲಾವಿದರು ಆಯ್ಕೆಯಾಗಿದ್ದಾರೆ. ಇದೇ 30ರಂದು ನಗರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಗೌರವ ಪ್ರಶಸ್ತಿ ಪುರಸ್ಕೃತರಿಗೆ ತಲಾ ₹ 50 ಸಾವಿರ ನಗದು, ವಾರ್ಷಿಕ ಪ್ರಶಸ್ತಿ ಪಡೆಯುವವರಿಗೆ ತಲಾ ₹ 25 ಸಾವಿರ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕ ಸಂಗೀತ: ಡಾ.ಬಿ.ಎಂ. ಜಯಶ್ರೀ, ಬೆಂಗಳೂರು (ಹಾಡುಗಾರಿಕೆ), ಎಚ್‌.ಎಸ್‌. ವೇಣುಗೋಪಾಲ್‌, ಬೆಂಗಳೂರು (ಕೊಳಲು), ಆನೂರು ಅನಂತಕೃಷ್ಣ ಶರ್ಮಾ, ಬೆಂಗಳೂರು (ಮೃದಂಗ), ಪಿ. ನಾರಾಯಣಸ್ವಾಮಿ, ಕೋಲಾರ (ಡೋಲು).

‌ಹಿಂದೂಸ್ತಾನಿ ಸಂಗೀತ: ಡಾ. ನಾಗರಾಜರಾವ್‌ ಹವಾಲ್ದಾರ್‌, ಬೆಂಗಳೂರು (ಗಾಯನ), ಸುಧಾಂಶು ಕುಲಕರ್ಣಿ, ಬೆಳಗಾವಿ (ಹಾರ್ಮೋನಿಯಂ), ಸೋಮಶೇಖರ ಪಾಟೀಲ, ಕಲಬುರ್ಗಿ (ತಬಲ).

ನೃತ್ಯ: ಸುಭದ್ರಾ ಪ್ರಭು, ಬೆಂಗಳೂರು (ಕೂಚಿಪುಡಿ), ಡಾ.ಕೆ. ಕುಮಾರ್‌, ಮೈಸೂರು (ಭರತನಾಟ್ಯ), ನಂದಿನಿ ಕೆ. ಮೆಹ್ತಾ, ಬೆಂಗಳೂರು (ಕಥಕ್‌), ರಾಜಶ್ರೀ ಎಸ್‌. ಶೆಣೈ, ಮಂಗಳೂರು (ಭರತನಾಟ್ಯ).

ಸುಗಮ ಸಂಗೀತ: ಎಚ್.ಫಲ್ಗುಣ, ಬೆಂಗಳೂರು.

ಕಥಾ ಕೀರ್ತನ: ಶಿವಮೂರ್ತಿಶಾಸ್ತ್ರಿಗಳು ಹಿರೇಮಠ, ಹಾವೇರಿ.

ಗಮಕ: ಎಂ.ಆರ್‌. ಕೇಶವಮೂರ್ತಿ, ಬೆಂಗಳೂರು (ವಾಚನ), ಜಿ.ಎಸ್‌. ಶ್ರೀನಿವಾಸಮೂರ್ತಿ, ತುಮಕೂರು (ವ್ಯಾಖ್ಯಾನ).

ಸಂಘಸಂಸ್ಥೆ: ಶ್ರೀಮಂತ ನಾನಾ ಸಾಹೇಬ ನಾಡಗೀರ ಸ್ಮೃತಿ ಪ್ರತಿಷ್ಠಾನ, ಕುಂದಗೋಳ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !