ವಿಜಯಪುರದ ಕಗ್ಗೋಡು ಗ್ರಾಮದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ

7

ವಿಜಯಪುರದ ಕಗ್ಗೋಡು ಗ್ರಾಮದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ

Published:
Updated:

ಹುಬ್ಬಳ್ಳಿ: ಭಾರತ ವಿಕಾಸ ಸಂಗಮ ಸಂಸ್ಥೆಯು ವಿಜಯಪುರದ ಕಗ್ಗೋಡು ಗ್ರಾಮದ ಶ್ರೀರಾಮನಗೌಡ ಬಾ ಪಾಟೀಲ ಗೋರಕ್ಷಾ ಕೇಂದ್ರದಲ್ಲಿ  ಭಾರತೀಯ ಸಂಸ್ಕೃತಿ ಉತ್ಸವದ ಐದನೇ ಆವೃತ್ತಿಯನ್ನು ಡಿಸೆಂಬರ್ 24ರಿಂದ 31ರ ವರೆಗೆ ಆಯೋಜಿಸಿದೆ ಎಂದು ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರು ನೇತೃತ್ವ ವಹಿಸಿದ್ದಾರೆ. ಎಂಟು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಸುಮಾರು 20 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಮಾತೃ ಸಂಗಮ, ಕಾಯಕ ಮತ್ತು ಆರೋಗ್ಯ ಸಂಗಮ, ಗ್ರಾಮ ಸಂಗಮ, ಧರ್ಮ ಮತ್ತು ಸಂಸ್ಕೃತಿ ಸಂಗಮ ಎಂಬ ವಿಭಿನ್ನ ಪರಿಕಲ್ಪನೆಯಲ್ಲಿ ವಸ್ತುಪ್ರದರ್ಶನ ಮತ್ತು ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ರಾಷ್ಟ್ರಪತಿ, ಉಪರಾಷ್ಟ್ರಪತಿ, ರಕ್ಷಣಾ ಸಚಿವ, ರಾಜ್ಯದ ರಾಜ್ಯಪಾಲರು ಸೇರಿದಂತೆ ನೂರಾರು ಗಣ್ಯರು, ದೇಶದ ವಿವಿಧ ರಾಜ್ಯಗಳ ಧಾರ್ಮಿಕ ಮುಖಂಡರು, ವಿಜ್ಞಾನಿಗಳು, ವಿಶ್ವವಿದ್ಯಾಲಯದ ಕುಲಪತಿಗಳು, ಕೃಷಿ ತಜ್ಞರು ಭಾಗವಹಿಸುವರು ಎಂದರು.

ಉತ್ಸವದ ಸಾಂಸ್ಕೃತಿಕ ಸಂಚಾಲಕ ಯಶವಂತ ಸರದೇಶಪಾಂಡೆ ಮಾತನಾಡಿ, ಛತ್ರಪತಿ ಶಿವಾಜಿ ಮತ್ತು ಅಕ್ಕಮಹಾದೇವಿ ನಾಟಕ ಪ್ರದರ್ಶನವಾಗಲಿದೆ. ನಿರ್ದೇಶಕ ಯೋಗರಾಜ ಭಟ್, ಕಲಾವಿದ ರಂಗಾಯಣ ರಘು ಸೇರಿದಂತೆ ಹಲವು ಕಲಾವಿದರು ಭಾಗವಹಿಸುವರು ಎಂದರು. ಭಾರತ ವಿಕಾಸ ಸಂಗಮದ ರಾಜ್ಯ ಸಂಚಾಲಕ ಚಂದ್ರಶೇಖರ ಡವಳಗಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !