ಶನಿವಾರ, ಆಗಸ್ಟ್ 17, 2019
27 °C
ಆಕ್ಸ್‌ಫರ್ಡ್‌ ವಿವಿ ಪ್ರಾಧ್ಯಾಪಕ ಪ್ರೊ. ಸುಬೀರ್ ಸರ್ಕಾರ್ ಅಭಿಮತ

ವಿಜ್ಞಾನ ಕ್ಷೇತ್ರಕ್ಕೆ ರಾಜಕೀಯ ಬಣ್ಣ ಬಳಿಯಬೇಡಿ: ಸುಬೀರ್ ಸರ್ಕಾರ್

Published:
Updated:
Prajavani

ಬೆಂಗಳೂರು: ‘ರಾಜಕೀಯಕ್ಕೆ ವಿಜ್ಞಾನಿಗಳು ಪ್ರವೇಶಿಸುತ್ತಿರುವುದು ಉತ್ತಮ ಬೆಳವಣಿಗೆ. ಆದರೆ, ವಿಜ್ಞಾನ ಕ್ಷೇತ್ರದಲ್ಲಿ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ’ ಎಂದು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಸುಬೀರ್ ಸರ್ಕಾರ್ ತಿಳಿಸಿದರು. 

ಪಿ.ಎಂ. ಭಾರ್ಗವ ಸ್ಮರಣಾರ್ಥ ಸಂಭಾವನಾ ಟ್ರಸ್ಟ್ ಹಾಗೂ ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್ ನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. 

‘ವಿಜ್ಞಾನವನ್ನು ದೇಶದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಬೇಕು. ಆದರೆ, ಬದಲಾದ ಸನ್ನಿವೇಶದಲ್ಲಿ ವಿಜ್ಞಾನ ಕ್ಷೇತ್ರಕ್ಕೆ ಸಹ ರಾಜಕೀಯ ಬಣ್ಣ ಬಳಿಯುವ ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಎಚ್ಚರವಹಿಸಬೇಕಾಗಿದೆ. ವಿಜ್ಞಾನ ಕ್ಷೇತ್ರಕ್ಕೆ ಸೂಕ್ತ ಆದ್ಯತೆ ದೊರೆತಲ್ಲಿ ಸಹಜವಾಗಿಯೇ ದೇಶ ಅಭಿವೃದ್ಧಿಯೆಡೆಗೆ ಹೆಜ್ಜೆ ಹಾಕಲಿದೆ. ಹಾಗಾಗಿ ವೈಜ್ಞಾನಿಕ ಆಲೋಚನೆಗಳು ಅನುಷ್ಠಾನವಾಗಲು ವಿಜ್ಞಾನಿಗಳು ರಾಜಕೀಯ ಪ್ರವೇಶಿಸುವುದರಲ್ಲಿ ತಪ್ಪಿಲ್ಲ’ ಎಂದು ತಿಳಿಸಿದರು. 

‘ಅಮೆರಿಕದ ನಿಯತಕಾಲಿಕೆಯೊಂದು ವಿಜ್ಞಾನಿಗಳು ಕೂಡಾ ಸೈನಿಕರಷ್ಟೇ ವಿಶ್ವಾಸಕ್ಕೆ ಅರ್ಹರು ಎಂದು ಹೇಳಿದೆ. ವಿಜ್ಞಾನಿಗಳು ಸಾಮಾಜಿಕ ಸಮಸ್ಯೆಗಳಿಗೆ ತಮ್ಮದೇ ಆದ ವಿಧಾನದಲ್ಲಿ ಪ್ರತಿಭಟಿಸುತ್ತಾ ಬಂದಿದ್ದಾರೆ. ಹೆಚ್ಚು ಜವಾಬ್ದಾರಿ ಇವರ ಮೇಲೆ ಇರುವುದರಿಂದ ಸೂಕ್ಷ್ಮತೆಯನ್ನು ಅರಿತು, ಪ್ರತಿಕ್ರಿಯಿಸುತ್ತಾರೆ. 2015ರಲ್ಲಿ ಅಸಹಿಷ್ಣುತೆಯನ್ನು ವಿರೋಧಿಸಿ ಪಿ.ಎಂ. ಭಾರ್ಗವ ಅವರು ಪದ್ಮಭೂಷಣ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು’ ಎಂದು ನೆನಪಿಸಿಕೊಂಡರು. 

Post Comments (+)