ಧರ್ಮ ಎಂದರೆ ಸೆಕ್ಯೂಲರ್‌ಗಳಿಗೆ ಗೊಂದಲ: ಪ್ರಹ್ಲಾದ್ ಜೋಶಿ

7

ಧರ್ಮ ಎಂದರೆ ಸೆಕ್ಯೂಲರ್‌ಗಳಿಗೆ ಗೊಂದಲ: ಪ್ರಹ್ಲಾದ್ ಜೋಶಿ

Published:
Updated:

ಹುಬ್ಬಳ್ಳಿ:  ‘ಧರ್ಮ ಎಂದರೆ ಜಾತ್ಯತೀತರಿಗೆ ಗೊಂದಲವಾಗುತ್ತದೆ. ಹಿಂದೂ ಧರ್ಮ ಕೇವಲ ಪೂಜಾ ಪದ್ಧತಿಗೆ ಸೀಮಿತವಾಗಿಲ್ಲ, ಅದು ಜೀವನದ ಪದ್ಧತಿಯೇ ಆಗಿದೆ’ ಎಂದು ಸಂಸದ ಪ್ರಹ್ಲಾದ್ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮಿನೃಸಿಂಹ ಪೀಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರ ವರ್ಧಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾನಾಡಿದರು. ‘ಹೀಗೆಯೇ ಪೂಜಿಸಿದರೆ ನಡೆದುಕೊಂಡರೆ ಮಾತ್ರ ದೇವರನ್ನು ಕಾಣಬಹುದು ಎಂದು ಹಿಂದೂ ಧರ್ಮ ಹೇಳುವುದಿಲ್ಲ. ಆದರೆ ಜಗತ್ತಿನ ಉಳಿದ ಎಲ್ಲ ಧರ್ಮಗಳೂ ಹಾಗೆ ಹೇಳುತ್ತವೆ. ಚಾರ್ವಾಕನನ್ನು ಸಹ ಋಷಿ ಎಂದ ದೇಶ ನಮ್ಮದು’ ಎಂದರು.

‘ಜಾತ್ಯತೀತ ಹೆಸರಿನಲ್ಲಿ ಧರ್ಮವನ್ನು ಅಪಭ್ರಂಶಗೊಳಿಸುವ ಕೆಲಸ ನಡೆಯುತ್ತಿದೆ. ರಾಜಕಾರಣದಲ್ಲಿ ಧರ್ಮ ಇರಬಾರದು ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಆದರೆ ವಾಜಪೇಯಿ ಅವರು ಧರ್ಮ ಎಲ್ಲದರಲ್ಲಿಯೂ ಇರಬೇಕು ಎಂದಿದ್ದರು. ದೇಶವನ್ನು ಉಳಿಸುವ ವ್ಯವಸ್ಥೆ ಇದ್ದರೆ ಅದು ಧರ್ಮ ಜಾಗೃತಿ. ಆದಿಶಂಕರರು ವಿಶ್ವ ಸಮಾನತೆ ಸಾರಿದರು. ಯಾರೂ ಪಾಪಿಗಳಿಲ್ಲ ಎಂದರು’ ಎಂದು ಹೇಳಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !