‘ದೇಶದ್ರೋಹ ಕಾಯ್ದೆ ರದ್ದು: ಮೂರ್ಖತನದ ಪರಮಾವಧಿ’

ಮಂಗಳವಾರ, ಏಪ್ರಿಲ್ 23, 2019
25 °C

‘ದೇಶದ್ರೋಹ ಕಾಯ್ದೆ ರದ್ದು: ಮೂರ್ಖತನದ ಪರಮಾವಧಿ’

Published:
Updated:

ಕಲಬುರ್ಗಿ: ‘ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ದೇಶದ್ರೋಹ ಕಾಯ್ದೆ ರದ್ದು ಮಾಡುತ್ತೇವೆ ಎಂದು ಹೇಳಿರುವುದು ಮೂರ್ಖತನದ ಪರಮಾವಧಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನವರಿಗೆ ಸರಿಯಾಗಿ ಸಲಹೆ ಕೊಡುವವರು ಯಾರೂ ಇಲ್ಲ. ಪ್ರಣಾಳಿಕೆ ಸುಳ್ಳು ಭರವಸೆಗಳಿಂದ ಕೂಡಿದ್ದು, ಅವು ಕಾರ್ಯರೂಪಕ್ಕೆ ಬರುವುದಿಲ್ಲ’ ಎಂದು ಟೀಕಿಸಿದರು.

‘ಹಾಸನದಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ. ಮಂಡ್ಯ ಕ್ಷೇತ್ರವನ್ನು ಯಾವ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ತುಮಕೂರಿನಲ್ಲಿ ಎಚ್.ಡಿ.ದೇವೇಗೌಡ ಅವರಿಗೆ ಕಠಿಣ ಪೈಪೋಟಿ ಕೊಡುತ್ತೇವೆ. ಜೆಡಿಎಸ್ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ ಎಂಬುದನ್ನು ಅಪ್ಪ–ಮಕ್ಕಳೇ ಹೇಳಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !