ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಳದಲ್ಲಿ ಸ್ವಯಂ ಚಾಲಿತ ತರಕಾರಿ ಬೀಜದ ಯಂತ್ರ

Last Updated 22 ಜನವರಿ 2019, 19:10 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯು ಸ್ವಯಂ ಚಾಲಿತ ತರಕಾರಿ ಬೀಜ ನೀಡುವ ಯಂತ್ರವನ್ನು ಸ್ಥಾಪಿಸಿದೆ. ಜ.23ರಿಂದ ನಡೆಯುವ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಈ ಪ್ರದರ್ಶನ ಇರಲಿದೆ.

ಸಂಸ್ಥೆಯ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದಲ್ಲಿ ಈ ಯಂತ್ರವನ್ನು ಅಳವಡಿಸಲಾಗಿದೆ. ಯಂತ್ರದಲ್ಲಿ ಆರು ಟ್ರೇಗಳಲ್ಲಿ 36 ವಿವಿಧ ಬಗೆಯ ತರಕಾರಿ ಬೀಜಗಳನ್ನು ಸಾಲಾಗಿ ಜೋಡಿಸಲಾಗಿದೆ.

ಯಂತ್ರದ ಬಲಭಾಗದಲ್ಲಿ ಲಭ್ಯವಿರುವ ತರಕಾರಿ ಬೀಜಗಳ ಚಿತ್ರವನ್ನು ಪ್ರದರ್ಶಿಸುವ ಪರದೆ ಇದೆ. ರೈತರು ತಮಗೆ ಬೇಕಾದ ತರಕಾರಿ ಬೀಜದ ಮೇಲೆ ಕ್ಲಿಕ್ ಮಾಡಿ ಇಪ್ಪತ್ತು ರೂಪಾಯಿಗಳನ್ನು ಯಂತ್ರಕ್ಕೆ ನೀಡಿದರೆ, ತರಕಾರಿ ಬೀಜದ ಪ್ಯಾಕೆಟ್ ಯಂತ್ರದ ಕೆಳ ಭಾಗದಲ್ಲಿ ಬಂದು ಬೀಳುತ್ತದೆ. ಬೆಳಿಗ್ಗೆ 9 ರಿಂದ ಸಂಜೆ 5ರ ತನಕ ಈ ಯಂತ್ರದ ಸೌಲಭ್ಯವನ್ನು ಪಡೆಯಬಹುದು ಎಂದು ತರಕಾರಿ ಬೀಜಗಳ ವಿಭಾಗದ ವಿಜ್ಞಾನಿ ಡಾ.ಸದಾಶಿವ ಅವರು ತಿಳಿಸಿದರು.

ಸಂಸ್ಥೆಯ ನಿರ್ದೇಶಕರಾದ ಎಂ.ಅರ್. ದಿನೇಶ್ ಅವರು ‘ ಮುಂದೆ ಬೆಂಗಳೂರಿನ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಈ ಯಂತ್ರವನ್ನು ಅಳವಡಿಸಲಾಗುವುದು’ ಎಂದುತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT