ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಡಿ ಮೇಲೆ ಪಾಲಿಕೆ ಅಧಿಕಾರಿಗಳ ತಂಡದ ದಾಳಿ: 153 ಕೆ.ಜಿ. ಪ್ಲಾಸ್ಟಿಕ್ ವಶ

Last Updated 19 ಮೇ 2019, 11:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ದುರ್ಗದ ಬೈಲ್, ಉಳ್ಳಾಗಡ್ಡಿ ಓಣಿ ಹಾಗೂ ಪಾನ್ ಬಜಾರ್‌ನ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿರುವ ಪಾಲಿಕೆ ಅಧಿಕಾರಿಗಳು, 153 ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು ₹ 60 ಸಾವಿರ ದಂಡ ವಿಧಿಸಿದ್ದಾರೆ.

ನೀಲಕಂಠ ಪ್ಲಾಸ್ಟಿಕ್ಸ್ ಅಂಗಡಿಯಿಂದ 115 ಕೆ.ಜಿ, ಸಜ್ಜನ್‌ ಏಜೆನ್ಸಿಯಿಂದ 18 ಕೆ.ಜಿ ಹಾಗೂ ಸಜ್ಜನ್ ‍ಪ್ಲಾಸ್ಟಿಕ್ ಅಂಗಡಿಯಿಂದ 20 ಕೆ.ಜಿ ಪ್ಲಾಸ್ಟಿಕ್ ನಿಷೇಧಿತ ಪ್ಲಾಸ್ಟಿಕ್ ಜಪ್ತಿ ಮಾಡಲಾಗಿದೆ ಎಂದು ಪಾಲಿಕೆಯ ಪರಿಸರ ಅಧಿಕಾರಿ ಶ್ರೀಧರ್ ಟಿ.ಎನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪರಿಸರ ಅಧಿಕಾರಿ ಸಂತೋಷ್ ಯರಂಗಲಿ, ಆರೋಗ್ಯ ನಿರೀಕ್ಷಕರಾದ ಯಲ್ಲಪ್ಪ ಯರಗುಂಟಿ, ಅರುಣ್ ಕುಮಾರ್ ಟಿ.ಎಚ್, ಪುಂಡಲೀಕ ಯತನೂರ, ಮಹಾಂತೇಶ್ ನಿಡುವಣಿ ದಾಳಿ ನಡೆಸಿದ ತಂಡದಲ್ಲಿದ್ದರು. ನಿಷೇಧಿತ ಪ್ಲಾಸ್ಟಿಕ್ ಕೈಚೀಲ, ಇತರ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಅಧಿಕಾರಿಗಳು ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT