ಸಾದಾಹಳ್ಳಿಯಲ್ಲಿ 17ರಿಂದ ಚರ್ಮ ವೈದ್ಯರ ಸಮ್ಮೇಳನ

7

ಸಾದಾಹಳ್ಳಿಯಲ್ಲಿ 17ರಿಂದ ಚರ್ಮ ವೈದ್ಯರ ಸಮ್ಮೇಳನ

Published:
Updated:

ಬೆಂಗಳೂರು: ಬೆಂಗಳೂರು ಚರ್ಮರೋಗಶಾಸ್ತ್ರ ಸೊಸೈಟಿ ಇದೇ 17ರಿಂದ ಯಲಹಂಕ ಬಳಿಯ ಸಾದಾಹಳ್ಳಿಯಲ್ಲಿ ಮೂರು ದಿನಗಳ ಕಾಲ ಚರ್ಮರೋಗ ವೈದ್ಯರ ಸಮ್ಮೇಳನವನ್ನು ಆಯೋಜಿಸಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಚರ್ಮರೋಗ ತಜ್ಞರ ಸಂಘದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಡಾ.ರಘುನಾಥ್‌ ರೆಡ್ಡಿ ,‘ಚರ್ಮರೋಗಗಳ ಪರಿಣಾಮಗಳ ಕುರಿತು ಸಮ್ಮೇಳನದಲ್ಲಿ ತಜ್ಞರಿಗೆ ಅರಿವು ಮೂಡಿಸಲಾಗುತ್ತದೆ. 21 ರಾಷ್ಟ್ರಗಳ ಚರ್ಮಶಾಸ್ತ್ರ ಸಂಘಗಳ ಅಧ್ಯಕ್ಷರು ಮತ್ತು 80 ಜನ ಅಂತರರಾಷ್ಟ್ರೀಯ ಭಾಷಣಕಾರರು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

‘ಚರ್ಮರೋಗಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಚರ್ಮರಥ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಡಿ.21ರಂದು ನವದೆಹಲಿಯಿಂದ ಸಂಚಾರವನ್ನು ಆರಂಭಿಸಿದ ಈ ಯಾತ್ರೆ ದೇಶದಾದ್ಯಂತ ಸಂಚರಿಸಲಿದೆ. ಜ.16ರಂದು ಬೆಂಗಳೂರಿಗೆ ಬರಲಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !